9 ವರ್ಷದ ಸಾಧನೆಯ ಅಭಿನಂದನೆಗಳು…. ಶ್ರೀ ನರೇಂದ್ರ ಮೋದಿ ಸೇವಾ ಟ್ರಸ್ಟ್ ರಿ,
ಒಂಭತ್ತು ವರ್ಷಗಳ ಪಯಣಕ್ಕೆ ಒಂದು ಸಣ್ಣ ಪೆಪ್ಪರ್ಮಿಂಟ್ ತಿಂದರೂ ಪ್ಲಾಸ್ಚಿಕ್ ಚೀಟಿಯನ್ನು ನೆಲಕ್ಕೆಸೆಯುವಾಗ, ಬೇಡವೆಂದನಿಸಿ ಜೇಬಿನಲ್ಲಿಟ್ಟಕೊಂಡು ಮನೆಗೆ ಬಂದು ಕಸದಬುಟ್ಚಿಗೆ ಎಸೆಯುವಷ್ಟು ಬೆಳೆದ ಅಂತರ್ಪ್ರಜ್ಞೆಗೆ …….. ರಸ್ತೆಬದಿಯಲ್ಲಿ ಒಂದು ಕೇಜಿ ಸಪೋಟಾ ಹಣ್ಣು ಕೊಂಡು ನಲವತ್ತು ರೂಪಾಯಿಯ ವಹಿವಾಟಿಗೆ ಐನೂರರ ನೋಟು ಹಿಡಿದು ಚಿಲ್ಲರೆಗಾಗಿ ಅಲೆಯುತ್ತಿದ್ದಾಗ, ಹಣ್ಣು ಮಾರುವವ Paytm ಮಾಡಿ ಎಂದು QR Code Scanner ಹಿಡಿಯುವಷ್ಟು ಬಂದ ಆಧುನಿಕತೆಗೆ ….. ಮೂಗು ಮುಚ್ಚಿಕೊಂಡು, ಹೀಕರಿಸಿಕೊಂಡು, ಮನೆಯಿಂದ ಒಯ್ದ tissue paperನಲ್ಲಿ ಸೀಟುಗಳನ್ನು clean ಮಾಡಿ, ಕಷ್ಟಪಟ್ಟು ಮುಗಿಸುತ್ತಿದ್ದ ರೈಲು ಪ್ರಯಾಣದಿನಗಳು ದೂರವಾಗಿ, ಶುಚಿಯಾದ ನಿಲ್ದಾಣ, ಶುಭ್ರ ಆಸನಗಳು, ಸ್ವಚ್ಛ ಶೌಚಾಲಯಗಳ ರೈಲಿನಲ್ಲಿ ರಾಜಾರೋಷವಾಗಿ ನೆಮ್ಮದಿಯಿಂದ ಪ್ರಯಾಣ ಮಾಡುವ ಸೌಲಭ್ಯಕ್ಕೆ……. ಹೊರದೇಶಗಳಲ್ಲಿ ಸುತ್ತುವಾಗ, ಅಲ್ಲಿನವರು ಸೂರ್ಯ ನಮಸ್ಕಾರ, ಸರ್ವಾಂಗಾಸನ, ಭುಜಂಗಾಸನ, ಪ್ರಾಣಾಯಾಮ ವೆಂದು ಯೋಗದ ವಿಷಯವಾಗಿ, ಭಾರತವನ್ನು ಕುರಿತು ಮಾತನಾಡುವ ಹೆಮ್ಮೆಯ ಕ್ಷಣಗಳಿಗೆ…… ಪಕ್ಕದ ಪಾಕಿಸ್ತಾನ, ಶ್ರೀಲಂಕಾ, ನೇಪಾಳದಲ್ಲಿ ಹದಗೆಟ್ಟ ಪರಿಸ್ಥಿತಿ ಇದ್ದರೂ ನಾವು ನಮ್ಮ ದೇಶದಲ್ಲಿ ನೆಮ್ಮದಿಯಾಗಿದ್ದು ನಮ್ಮ ಕರ್ಮಯೋಗಿ ಪ್ರಧಾನಿಗೆ ಬಾಯಿಗೆ ಬಂದಂತೆ ಬಯ್ಯುವ ಈ ...