Posts

Showing posts from August, 2025
Image
ಆರ್ ವಿ ಕಾಲೇಜ್ ಆಫ್ ಇಂಜಿನಿಯರಿಂಗ್ ಪ್ರಥಮ ವರ್ಷದ ಉದ್ಘಾಟನೆ-2025 ಬ್ಯಾಚ್ ಪತ್ರಿಕಾಗೋಷ್ಠಿ 08 24, 2025: ಆರ್ ವಿ ಕಾಲೇಜ್ ಆಫ್ ಇಂಜಿನಿಯರಿಂಗ್ RVCE, ವಿದ್ಯಾರ್ಥಿಗಳನ್ನು ಸ್ವಾಗತಿಸಲು ಒಂದು ಅದ್ಧೂರಿ ಪ್ರಥಮ ವರ್ಷದ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಿತ್ತು. ಇದು ಅವರ ಶೈಕ್ಷಣಿಕ ಪ್ರಯಾಣದ ಆರಂಭವನ್ನು ಗುರುತಿಸಿದೆ. ಈ ಸಮಾರಂಭದಲ್ಲಿ ಹಿರಿಯ ಅಧ್ಯಾಪಕರು, ಆಡಳಿತ ಮಂಡಳಿ ಸದಸ್ಯರು, ಹಳೆಯ ವಿದ್ಯಾರ್ಥಿಗಳು, ಪೋಷಕರು, ವಿದ್ಯಾರ್ಥಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳು ಭಾಗವಹಿಸಿದ್ದರು. ಇದು ಶೈಕ್ಷಣಿಕ ಶ್ರೇಷ್ಠತೆ, ನಾವೀನ್ಯತೆ ಮತ್ತು ಸಮಗ್ರ ಅಭಿವೃದ್ಧಿಗೆ ಕಾಲೇಜಿನ ಬದ್ಧತೆಯನ್ನು ಪ್ರತಿಬಿಂಬಿಸಿದೆ. ಡಾ. ಎ.ವಿ.ಎಸ್. ಮೂರ್ತಿ, ಗೌರವಾನ್ವಿತ ಕಾರ್ಯದರ್ಶಿ, ಆರ್‌ಎಸ್‌ಎಸ್‌ಟಿ, ಮುಖ್ಯ ಅತಿಥಿಗಳನ್ನು ಅತ್ಮೀಯವಾಗಿ ಸ್ವಾಗತಿಸಿ ಪರಿಚಯಿಸಿದರು. ಅವರು ಭವಿಷ್ಯದ ಇಂಜಿನಿಯರ್‌ಗಳು ಮತ್ತು ಹೊಸ ಆವಿಷ್ಕಾರಕರಿಗೆ ಮಾರ್ಗದರ್ಶನ ನೀಡುವ ಮಹತ್ವವನ್ನು ಒತ್ತಿ ಹೇಳಿದರು, ಮತ್ತು ಕರ್ನಾಟಕದ ಗೌರವಾನ್ವಿತ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ. ಸುಧಾಕ‌ರ್ ಅವರನ್ನು ಪರಿಚಯಿಸಿದರು. ಈ ಕಾರ್ಯಕ್ರಮದಲ್ಲಿ ಡಾ. ಎಂ.ಪಿ. ಶ್ಯಾಮ್, ಆಡಳಿತ ಮಂಡಳಿ ಮತ್ತು ಆರ್‌ಎಸ್‌ಎಸ್‌ಟಿ ಅಧ್ಯಕ್ಷರು; ಡಾ. ಎ.ಸಿ. ಚಂದ್ರಶೇಖರ್ ರಾಜು ಮತ್ತು ಡಾ. ವಿನೋದ್ ಹಯಗ್ರೀವ್, ಆರ್‌ಎಸ್‌ಎಸ್‌ಟಿ ಉಪಾಧ್ಯಕ್ಷರು; ಶ್ರೀ ಡಿ.ಪಿ. ನಾಗರಾಜ್, ಗೌರವಾನ್ವಿತ ಜಂಟಿ ಕಾರ್ಯದರ್ಶಿ, ಶ್ರ...
Image
  ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದಿಂದ ನವೆಂಬರ್ 11ರಂದು ಸಾಮೂಹಿಕ ವಿವಾಹ ಕಾರ್ಯಕ್ರಮ . ಬೆಂಗಳೂರು ಆಗಸ್ಟ್ 19; ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ವತಿಯಿಂದ ಬರುವ ನವೆಂಬರ್  ಎರಡರಂದು 101ಜೋಡಿಗಳ ಉಚಿತ ಸಾಮೂಹಿಕ ವಿವಾಹ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಸುದ್ದಿಗೋಷ್ಢಿಯಲ್ಲಿ ಈ ವಿಷಯ ತಿಳಿಸಿದ ಮಹಿಳಾ ರಾಜ್ಯಾಧ್ಯಕ್ಷೆ ರೇಣುಕಾ ವಿ.ಬೊಮ್ಮಸಂದ್ರ,ಕನ್ನಡಾಂಬೆ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕನ್ನಡಾಂಬೆ ಮಂಜು,ನವೆಂಬರ್ 11ರಂದು ಆನೇಕಲ್ ನ ಎ ಎಸ್ ಬಿ ಆಟದ ಮೈದಾನದಲ್ಲಿ ನಡೆಯಲಿದೆ,ಮದುವೆ ಮಾಡಿಕೊಳ್ಳಲು ಇಚ್ಚಿಸುವ ಜೋಡಿಗಳು ಅಕ್ಟೋಬರ್ 20ರೊಳಗೆ ಅಗತ್ಯ ದಾಖಲಾತಿಗಳೊಂದಿಗೆ ನೊಂದಾಯಿಸಿಕೊಳ್ಳಬೇಕು ಎಂದು ಹೇಳಿದರು. ಯಾವುದೇ ಧರ್ಮಕ್ಕೆ ಸೇರಿದವರು ಸಾಮೂಹಿಕ ವಿವಾಹಕ್ಕೆ ನೊಂದಾಯಿಸಿಕೊಳ್ಳಬಹುದಾಗಿದೆ.ಹಿಂದೂ ಧರ್ಮದ ಸಂಪ್ರದಾಯದ ಪ್ರಕಾರ ವಿವಾಹ ನಡೆಯಲಿದೆ ಎಂದರು. ವಿವಾಹಕ್ಕೆ ನೊಂದಾಯಿಸಿಕೊಳ್ಳವವರು ಹೆಚ್ಚಿನ ಮಾಹಿತಿಗಾಗಿ ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. 9900834039, 7899997609,9972524273,9886566498
Image
79 ನೇ ಸ್ವಾತಂತ್ರೋತ್ಸವದ ಅಂಗವಾಗಿ ಮುಂಜಾನೆ  ಕೆಎಂಡಿಸಿ ಭವನದಲ್ಲಿ ಕರ್ನಾಟಕ ರಾಜ್ಯ ಅಲ್ಪ ಸಂಖ್ಯಾತರ ಆಯೋಗದ ಅಧ್ಯಕ್ಷರಾದ ಶ್ರೀ ಯು.ನಿಸಾರ್ ಅಹ್ಮದ್, ಭಾಪೊಸ (ನಿ) ರವರು ಧ್ವಜಾರೋಹಣವನ್ನು ನೆರವೇರಿಸಿದರು  ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಶಿಕ್ಷಣದ ಮಹತ್ವವನ್ನು ತಿಳಿಸುತ್ತಾ ಶಿಕ್ಷಣದಿಂದ ಮಾತ್ರ ವ್ಯಕ್ತಿಯ ಹಕ್ಕುಗಳ ಪರಿಜ್ಞಾನ ಉಂಟಾಗುತ್ತದೆ ಈ ನಿಟ್ಟಿನಲ್ಲಿ ದೇಶವನ್ನು ಅಭಿವೃದ್ಧಿಪರವನ್ನಾಗಿ ಮಾಡಲು ಪ್ರತಿಯೊಬ್ಬರೂ ಸಹ ಶೈಕ್ಷಣಿಕವಾಗಿ ಸದೃಢವಾಗಿರಬೇಕೆಂದು ತಿಳಿಸಿದರು. ಭಾರತ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ವಿಶೇಷವಾಗಿ ಶಿಕ್ಷಣವು ಪ್ರಮುಖ ಪಾತ್ರವಹಿಸಿದ್ದು ಶಿಕ್ಷಣದಿಂದ ಸ್ವಾತಂತ್ರ್ಯ ಎಂಬುದರ ಸ್ಪಷ್ಟ ನಿದರ್ಶನವಾಗಿದೆ ಎಂದು ತಿಳಿಸಿದರು. ಆಯೋಗದ ಕಾರ್ಯದರ್ಶಿಗಳಾದ ಡಾ ಮಾಜುದ್ದೀನ್ ಖಾನ್ ರವರು ಮಾತನಾಡಿ, ಭಾರತವು ವಿಕಸಿತ ಭಾರತವಾಗಿ ಅಭಿವೃದ್ಧಿಯಾಗುವ ನಿಟ್ಟಿಯಲ್ಲಿ ನಮ್ಮೆಲ್ಲರ ವೈಯಕ್ತಿಕ ಕೊಡುಗೆ ಅತ್ಯಗತ್ಯ ಕರ್ನಾಟಕ ರಾಜ್ಯ ದೇಶದ ಅಭಿವೃದ್ಧಿಯಲ್ಲಿ ತನ್ನದೇ ಯಾದ ವಿಶಿಷ್ಟ ಕೊಡುಗೆಯನ್ನು ನೀಡುತ್ತಿದ್ದು ವಿಶೇಷವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ, ನವೋದ್ಯಮ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು. ಕರ್ನಾಟಕ ಉರ್ದು ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಮೊಹಮದ್ ಅಲಿ ಖಾಜಿ ರವರು ಮಾತನಾಡುತ್ತಾ ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರದಲ್ಲಿ ಎಲ್ಲಾ ಜನರ ಸಾಮಾಜಿಕ ಸಾಮರಸ್ಯದಿಂದ ಉತ್ತಮ ಸಮಾಜ ನಿರ್ಮಾಣ ಮಾ...
Image
 ದಲಿತ ಸಂಘರ್ಷ ಸಮಿತಿ - ಕರ್ನಾಟಕ  ಪತ್ರಿಕಾಗೋಷ್ಠಿ ಬ್ಯಾಂಗಲೋರ್ ಫಸ್ಟ್ ಕ್ಲಬ್  ಡಾ.ಬಿ.ಆ‌ರ್.ಅಂಬೇಡ್ಕರ್‌ರವರು ಸಂವಿಧಾನ ಕರಡು ರಚನ ಸಮಿತಿ ಅಧ್ಯಕ್ಷರಾಗಿ ಮಾನವೀಯತೆ, ಸಮಾನತೆ, ಭ್ರಾತೃತ್ವ, ಸ್ವಾತಂತ್ರ್ಯ, ಮತ್ತು ದೇಶದ ಸಾರ್ವಭೌಮತ್ವವನ್ನು ಸಾರುವ ಆಶಯಗಳ ಸಂವಿಧಾನವನ್ನು ರಚಿಸಿ ಸಂಸತ್ತಿಗೆ/ಕೇಂದ್ರ ಸರ್ಕಾರಕ್ಕೆ 1949ರಲ್ಲಿ ಅರ್ಪಿಸುವಾಗ "ಸಂವಿಧಾನದ ಆಶಯಗಳಾದ ಸಾಮಾಜಿಕ, ಆರ್ಥಿಕ-ಲಿಂಗ ಸಮಾನತೆಗಳನ್ನು ಅನುಷ್ಠಾನಗೊಳಿಸುವುದು ಕೇಂದ್ರ/ರಾಜ್ಯ ಸರ್ಕಾರಗಳ ಕರ್ತವ್ಯವಾಗಿದ್ದು ಅವುಗಳನ್ನು ಅನುಷ್ಠಾನಗೊಳಿಸದಿದ್ದಲ್ಲಿ ಭಾರತೀಯರು ಶೋಷಣೆಯಿಂದ ಮುಕ್ತರಾಗಲು ರಾಜಕೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಧಿಕ್ಕರಿಸುತ್ತಾರೆ. ಆ ರೀತಿ ಆಗದಂತೆ ಪ್ರಜಾಪ್ರಭುತ್ವವನ್ನು ಕಾಪಾಡಲು "ಸಂಪೂರ್ಣ ಸಮಾನತೆ'ಯನ್ನು ಸರ್ಕಾರಗಳು ಅನುಷ್ಠಾನಕ್ಕೆ ತರಬೇಕು. ಆದರೆ ಸರ್ಕಾರಗಳು ತಮ್ಮ ಕರ್ತವ್ಯ ನಿರ್ವಹಿಸುತ್ತಿಲ್ಲ. ಸರ್ಕಾರಗಳನ್ನು ಈ ಕುರಿತು ಆಗ್ರಹಿಸಲು ಅಹಿಂಸಾತ್ಮಕ ಪ್ರಜಾಸತ್ತಾತ್ಮಕ ಕಾನೂನಾತ್ಮಕ ಮಾರ್ಗಗಳಲ್ಲಿ ಚಳುವಳಿ/ಹೋರಾಟಗಳನ್ನು ಮಾಡುವ ನೈತಿಕ ಹೊಣೆಗಾರಿಕೆ ಜನರದ್ದು. ಅದಕ್ಕಾಗಿ ಜನರಿಗೆ ಹೋರಾಡುವ ಹಕ್ಕು/ಸ್ವಾತಂತ್ರ್ಯ/ಕರ್ತವ್ಯಗಳನ್ನು ಸಂವಿಧಾನದಲ್ಲಿ ನೀಡಲಾಗಿದೆ ಎಂಬ ಎಚ್ಚರಿಕೆಯ ಮಾತನ್ನು ಹೇಳಿ ಅಂಬೇಡ್ಕರರು ಪರಿನಿರ್ವಾಣ ಹೊಂದಿದ್ದಾರೆ. ದಲಿತ ಸಂಘರ್ಷ ಸಮಿತಿಯು ಆರಂಭವಾಗಿ 50 ವರ್ಷಗಳು ಕಳೆದಿದ್ದು, ಅಂಬೇಡ್ಕರರು ಭೋಧಿಸಿದ ...