ಕಲ್ಯಾಣ್ ಜ್ಯುವೆಲರ್ಸ್ ಷೋರೂಂ ಉದ್ಘಾಟಿಸಿದ ಬಾಲಿವುಡ್ ತಾರೆ ಸೋನಾಕ್ಷಿ ಸಿನ್ಹ ವಿಶ್ವ ದರ್ಜೆಯ ವಾತಾವರಣದಲ್ಲಿ ಗ್ರಾಹಕರಿಗೆ ಐಷಾರಾಮಿ ಖರೀದಿ ಅನುಭವ
ಬೆಂಗಳೂರಿನ ಕೋರಮಂಗಲದ 100 ಅಡಿ ರಸ್ತೆಯಲ್ಲಿನ ನವೀಕರಿಸಿದ ಕಲ್ಯಾಣ್ ಜ್ಯುವೆಲರ್ಸ್ ಷೋರೂಂ ಉದ್ಘಾಟಿಸಿದ ಬಾಲಿವುಡ್ ತಾರೆ ಸೋನಾಕ್ಷಿ ಸಿನ್ಹ ವಿಶ್ವ ದರ್ಜೆಯ ವಾತಾವರಣದಲ್ಲಿ ಗ್ರಾಹಕರಿಗೆ ಐಷಾರಾಮಿ ಖರೀದಿ ಅನುಭವ ನೀಡಲಿರುವ ಹೊಸ ಷೋರೂಂ ಉದ್ಘಾಟನೆಯ ಸಂಭ್ರಮಾಚರಣೆಗೆ ಭಾರಿ ರಿಯಾಯ್ತಿಗಳ ಘೋಷಣೆ ಬೆಂಗಳೂರು, 7 ಅಕ್ಟೋಬರ್ 2023: ಭಾರತದ ಅತ್ಯಂತ ವಿಶ್ವಾಸಾರ್ಹ ಮತ್ತು ಪ್ರಮುಖ ಆಭರಣ ಕಂಪನಿಗಳಲ್ಲಿ ಒಂದಾಗಿರುವ ಕಲ್ಯಾಣ್ ಜ್ಯುವೆಲ್ಲರ್ಸ್, ಇಂದು ಕೋರಮಂಗಲದ 100 ಅಡಿ ರಸ್ತೆಯಲ್ಲಿನ ತನ್ನ ಮರುವಿನ್ಯಾಸಗೊಳಿಸಿದ ಷೋರೂಂ ಪ್ರಾರಂಭಿಸಿದೆ. ಬಾಲಿವುಡ್ ತಾರೆ ಸೋನಾಕ್ಷಿ ಸಿನ್ಹಾ ಅವರು ಈ ಷೋರೂಂ ಉದ್ಘಾಟಿಸಿದರು. ಕಲ್ಯಾಣ್ ಜ್ಯುವೆಲರ್ಸ್ನ ವಿವಿಧ ಸಂಗ್ರಹಗಳ ವ್ಯಾಪಕ ಶ್ರೇಣಿಯ ಆಭರಣಗಳ ವಿನ್ಯಾಸಗಳನ್ನು ಈ ಷೋರೂಂ ಒಳಗೊಂಡಿದೆ. ಈ ಷೋರೂಂನಲ್ಲಿ ಗ್ರಾಹಕರು ವಿಶ್ವ ದರ್ಜೆಯ ವಾತಾವರಣದೊಂದಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ನಿರೀಕ್ಷಿಸಬಹುದು. ಇದು ಗ್ರಾಹಕರಿಗೆ ಸರಿಸಾಟಿಯಿಲ್ಲದ ಖರೀದಿ ಅನುಭವವನ್ನು ನೀಡುತ್ತದೆ. ಈ ಸಂದರ್ಭದಲ್ಲಿ, ಬಾಲಿವುಡ್ ತಾರೆ ಸೋನಾಕ್ಷಿ ಸಿನ್ಹಾ ಅವರು ಮಾತನಾಡಿ, ‘ಈ ಅದ್ಧೂರಿ ಸಂಭ್ರಮಾಚರಣೆಯ ಭಾಗವಾಗಿರುವುದಕ್ಕೆ ನನಗೆ ಸಂತೋಷವಾಗುತ್ತದೆ. ಗ್ರಾಹಕರಿಗೆ ಸರಿಸಾಟಿಯಿಲ್ಲದ ಚಿನ್ನಾಭರಣಗಳ ಖರೀದಿ ಅನುಭವವನ್ನು ನೀಡಲು ಬ್ರ್ಯಾಂಡ್ನ ಅಚಲ ಬದ್ಧತೆಗೆ ಈ ಭವ್ಯ ಷೋರೂಂ ಸಾಕ್ಷಿಯಾಗಿ...