Posts

Showing posts from September, 2023

ಕರ್ನಾಟಕ ಇಂಜಿನಿಯರ್‌ ಗಳ ಒಕ್ಕೂಟದಿಂದ ಸರ್.ಎಂ.ವಿಶ್ವೇಶ್ವರಯ್ಯ ಜಯಂತಿ

Image
ಸರ್.ಎಂ.ವಿ. ಸದಾ ಸ್ಮರಣೀಯರು, ರಾಜ್ಯ – ದೇಶಕ್ಕೆ ಅವರ ಕೊಡುಗೆ ಅನನ್ಯ – ಡಿಸಿಎಂ ಡಿ.ಕೆ. ಶಿವಕುಮಾರ್ ಕರ್ನಾಟಕ ಇಂಜಿನಿಯರ್‌ ಗಳ ಒಕ್ಕೂಟದಿಂದ ಸರ್.ಎಂ.ವಿಶ್ವೇಶ್ವರಯ್ಯ ಜಯಂತಿ; ಸಚಿವರಾದ ಸತೀಶ್‌ ಜಾರಕಿಹೊಳಿ, ರಾಮಲಿಂಗಾರೆಡ್ಡಿ ಭಾಗಿ *ಬೆಂಗಳೂರು, ಸೆ, 15:* ದೇಶದ ಶ್ರೇಷ್ಠ ಇಂಜಿನಿಯರ್ ಸರ್‌.ಎಂ. ವಿಶ್ವೇಶ್ವರಯ್ಯ ಅವರು ಸದಾ ಸ್ಮರಣೀಯರು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು. ನಗರದ ಕೆ. ಆರ್. ವೃತ್ತದ ಬಳಿ ಸರ್. ಮೋಕ್ಷಗುಂಡಂ ವಿಶ್ವೇಶ್ವರಾಯ ಅವರ 163 ನೇ ಜನ್ಮದಿನದ ಹಿನ್ನೆಲೆಯಲ್ಲಿ ಅವರ ಪುತ್ಥಳಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರೊಂದಿಗೆ ಡಿ.ಕೆ. ಶಿವಕುಮಾರ್ ಮಾಲಾರ್ಪಣೆ ಮಾಡಿದರು. ನಂತರ ಮಾತನಾಡಿದ ಅವರು, ವಿಶೇಷವಾಗಿ ಬೆಂಗಳೂರಿನ ಜನ ಸರ್‌.ಎಂ.ವಿ ಅವರನ್ನು ನೆನಪಿಸಿಕೊಳ್ಳಬೇಕು. ಅವರ ದೂರದೃಷ್ಟಿಯಿಂದಾಗಿ ನಗರದ ಜನತೆಗೆ ಕಾವೇರಿ ನೀರು ದೊರೆತಿದೆ. ಜೊತೆಗೆ ಅವರ ದೂರಗಾಮಿ ವಿದ್ಯುತ್‌ ಯೋಜನೆಗಳ ಫಲವನ್ನು ನಾವು ಅನುಭವಿಸುತ್ತಿದ್ದೇವೆ. ಕರ್ನಾಟಕ ಹಾಗೂ ದೇಶಕ್ಕೆ ಅವರು ನೀಡಿದ ಕೊಡುಗೆ ಅನನ್ಯ ಎಂದರು.  *ಕರ್ನಾಟಕ ಇಂಜಿನಿಯರ್‌ ಗಳ ಒಕ್ಕೂಟದ ಅಧ್ಯಕ್ಷರಾದ ವೆಂಕಟಶಿವರೆಡ್ಡಿ ಮಾತನಾಡಿ,* ಕರ್ನಾಟಕದ ಇಂಜಿನಿಯರ್‌ ಗಳು ಸರ್.ಎಂ.ವಿ ಅವರನ್ನು ಪ್ರೇರಣೆಯಾಗಿಟ್ಟುಕೊಂಡು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಅಂಬೇಡ್ಕರ್‌, ಗಾಂಧಿ...