ಧರ್ಮಸ್ಥಳದ ಮೇಲೆ ನಿರಂತರ ನಡೆದ ಅಘಾತಗಳಿಂದ ನಾಡಿನ ಕೋಟ್ಯಂತರ ಮಂದಿ ನೊಂದಿದ್ದಾರೆ . ಮುಸ್ಲಿಂ ಬಾಂಧವರಿಂದ ಧರ್ಮಸ್ಥಳ ಪಾದಯಾತ್ರೆ ಧರ್ಮಸ್ಥಳದ ಮೇಲೆ ನಿರಂತರ ನಡೆದ ಅಘಾತಗಳಿಂದ ನಾಡಿನ ಕೋಟ್ಯಂತರ ಮಂದಿ ನೊಂದಿದ್ದಾರೆ. ವಿಶೇಷ ತನಿಖಾ ದಳ ವಿಚಾರಣೆ ನಡೆಸಲು ಆರಂಭಿಸಿದ ನಂತರವಂತೂ ಅನೇಕ ಆರೋಪಗಳು ನಿರಾಧಾರವೆಂದು ಸಾಬೀತಾಗಿದ್ದು ನಾಡಿನ ಜನರೆದುರು ನಿಚ್ಚಳವಾಗಿದೆ. ಅದಾಗಲೇ ಜನರ ಮನಸ್ಸಲ್ಲಿ ಮನೆ ಮಾಡಿರುವ ಧರ್ಮಸ್ಥಳದ ಕುರಿತ ಕೆಟ್ಟ ಭಾವನೆಗಳನ್ನು ಹೋಗಲಾಡಿಸುವ ಜವಾಬ್ದಾರಿ ನಮ್ಮೆಲ್ಲರನ್ನೂ ಇದೆ. ಏಕೆಂದರೆ ಧರ್ಮಸ್ಥಳ ಬರಿ ಒಂದು ಸಮುದಾಯಕ್ಕೆ ಸೇರಿದ ದೇವಸ್ಥಾನವಷ್ಟೇ ಅಲ್ಲ. ಅದು ನೂರಾರು ಜನೋಪಯೋಗಿ ಕೆಲಸಗಳನ್ನು ಮಾಡುತ್ತಾ, ನಾಡಿನ ಜನರ ಆಶಾಕಿರಣವಾಗಿದೆ. ಸ್ವಸಹಾಯ ಸಂಘಗಳ ಮೂಲಕ ಧರ್ಮಸ್ಥಳ ಗ್ರಾಮಾಭಿವೃದು ಸಂಘ ಜಾತಿ-ಮತ-ಪಂಥ ಭೇದಗಳನ್ನು ಮರೆತು, ಎಲ್ಲರನ್ನೂ ಒಟ್ಟುಗೂಡಿಸಿ, ಸಾಲ ಕೊಟ್ಟು, ಅವರ ಆಶೋತ್ತರಗಳನ್ನು ಪೂರ್ಣಗೊಳಿಸಲು ಬೆಂಬಲವಾಗಿ ನಿಂತು, ಪ್ರತಿಯೊಬ್ಬರನ್ನೂ ಮೇಲೆತ್ತುವ ಕಾಯಕದಲ್ಲಿ ನಿರತವಾಗಿದೆ. ರುಡ್‌ಸೆಟ್ ಸ್ವಾವಲಂಬಿಗೊಳಿಸಿದ ತರುಣರಲ್ಲಿ ಹಿಂದೂಗಳು ಮಾತ್ರವಿಲ್ಲ. ಎಲ್ಲ ಜಾತಿ ಪಂಥ ವರ್ಗಗಳವರೂ ಇದ್ದಾರೆ. ಧರ್ಮಸ್ಥಳ ಅನ್ನದಾಸೋಹ ನಡೆಸುವಾಗ, ಜ್ಞಾನದಾಸೋಹ ನಡೆಸುವಾಗ, ಸ್ತ್ರೀಯರ ಮೂಲಕ ಸಮಾಜ ಸಂಘಟನೆಯ ಕೆಲಸದಲ್ಲಿ ನಿರತವಾಗುವಾಗ ಅಲ್ಲೆಲ್ಲಾ ಯಾವ ಅಡೆತಡೆಗಳೂ ಇಲ್ಲದೇ ಎಲ್ಲರನ್ನೂ ಸಮದರ್ಶಿಯಾಗಿ ನೋಡುವ ಭಾವ ಧ...