ಉಪ ಆಯುಕ್ತ ಡಾಕ್ಟರ್ ಕಿರಣ್ ಕುಮಾರ್ ಮೇಲೆ ಸುಳ್ಳು ಆರೋಪ ಸರಿಯೇ..

ಬೆಂಗಳೂರಿನ ಉತ್ತರ ತಾಲೂಕಿನ ಉಪ ಆಯುಕ್ತರಾದ ಡಾ. ಕಿರಣ್ ಕುಮಾರ್ ಅವರು ಪ್ರಾಮಾಣಿಕ ವ್ಯಕ್ತಿ ಎಂಬುದು ಜನರ ಅಭಿಪ್ರಾಯ

ಬೆಂಗಳೂರಿನ ಉತ್ತರ ತಾಲೂಕಿನ ಉಪ ಆಯುಕ್ತರಾದ ಡಾ. ಕಿರಣ್ ಕುಮಾರ್ ಅವರ ಮೇಲಿನ ಭ್ರಷ್ಟಾಚಾರ ಆರೋಪ ಸುಳ್ಳಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟರು.

ಬೆಂಗಳೂರು ನಗರ ಜಿಲ್ಲಾಧಿಕಾರಿ ಅವರು ಡಾ. ಕಿರಣ್ ಕುಮಾರ್ ಅವರನ್ನು ಸಮೀಕ್ಷೆಯೊಂದರ ಮೇಲ್ವಿಚಾರಣೆಗೆ ನೇಮಿಸಿದ್ದರು. ಈ ಹಿನ್ನಲೆಯಲ್ಲಿ ಎಸಿ ಕಿರಣ್ ಕುಮಾರ್ ಅವರು ಕಚೇರಿಗೆ ಬಂದಿರಲಿಲ್ಲ, ಹಾಗಾಗಿ ಕಿರಣ್ ಅವರು ಕೆಲಸಕ್ಕೆ ಬರುತ್ತಿಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು ಎಂದು ಕಂದಾಯ ಇಲಾಖೆಯ ಹೆಸರು ಹೇಳಲು ಇಚ್ಛೆಸದ ಉದ್ಯೋಗಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದರು. 

ಡಾ. ಕಿರಣ್ ಕುಮಾರ್ ಅವರನ್ನು ವಿರೋಧಿಸುವ ಕಿಡಿಗೇಡಿಗಳು ಕಿರಣ್ ಅವರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಸರ್ವಜನಿಕರೊಬ್ಬರು ಮಾಹಿತಿ ನೀಡಿದರು.

Comments

Popular posts from this blog