ಶ್ರೀ ರೇಣುಕಾ ಯಲ್ಲಮ್ಮ ದೇವಿಯ 15ನೇ ವಾರ್ಷಿಕೋತ್ಸವ 2026

ಬೆಂಗಳೂರು ಫೆಬ್ರವರಿ 27; ಶ್ರೀ ಮಹಿಷಿ ಮರ್ಧಿನಿ ಮತ್ತು ರೇಣುಕಾ ಯಲಮ್ಮ ಮತ್ತು ರೇಣುಕಾ ಯಲ್ಲಮ್ಮ ದೇವಿ ಚಾರಿಟಬಲ್ ಟ್ರಸ್ಟ್ ವತಿಯಿಂದ ರೇಣುಕಾ ಯಲ್ಲಮ್ಮ ದೇವಿಯ 15ನೇ ವಾರ್ಷಿಕೋತ್ಸವ ಸಮಾರಂಭ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ನಡೆಯಲಿದೆ.

ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಟ್ರಸ್ಟ್ ಮುಖ್ಯಸ್ಥ ಜಿ.ಸರ್ವೇಶ,ನಾಳೆ ಶನಿವಾರ ರೇಣುಕ ಯಲ್ಲಮ್ಮ ದೇವಿಗೆ ಶ್ರೀ ಮಹಿಷ ಮರ್ಧಿನಿ & ಶ್ರೀ ರೇಣುಕಾ ಯಲ್ಲಮ್ಮ ದೇವಿಯ 15ನೇ ವರ್ಷದ ವಾರ್ಷಿಕೋತ್ಸವ ಸೀತಾರಾಮ ಮುಚ್ಚಿಂತಾಯ, ಪ್ರವೀಣ್ ತಂತ್ರಿಗಳ ಆಚಾರ್ಯತ್ವದಲ್ಲಿ ಜರುಗಲಿದೆ, ಶನಿವಾರ ಸಂಜೆ 6ಕ್ಕೆ ಶ್ರೀ ರೇಣುಕಾ ಯಲ್ಲಮ್ಮ ದೇವಿಗೆ ವಾಸ್ತು ಹೋಮ, ವಾಸ್ತು ಪೂಜೆ, ರಾಕ್ಷೆಚ್ಚ ಹೋಮ, ವಾಸ್ತು ಹೋಮಗಳು ಜರುಗಲಿದೆ.ಭಾನುವಾರ ಬೆಳಿಗ್ಗೆ ಅಧಿವಾಸ ಹೋಮ, ಕಳಶಾಭಿಷೇಕ. ಚಂಡಿಕಾ ಹೋಮ, 11 ಕ್ಕೆ ಪೂರ್ಣಾಹುತಿ ಪ್ರಸನ್ನ ಪೂಜೆ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ‌ ನಡೆಯಲಿದ್ದು, ಶನಿವಾರ ರಾತ್ರಿ 7-30 ಕ್ಕೆ ಶ್ರೀ ವೆಂಕಟಸ್ವಾಮಿರೆಡ್ಡಿ 

ರವರ ನೇತೃತ್ವದಲ್ಲಿ ಹರೇ ರಾಮ ಹರೇ ಕೃಷ್ಣ ಭಜನಾ ಮತ್ತು ಕೋಲಾಟ ತಂಡವರಿಂದ ಭಜನೆ ಮತ್ತು ಕೋಲಾಟ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಅನೇಕಲ್ ಶಾಸಕ ಶಾಸಕ ಬಿ. ಶಿವಣ್ಣ,ಮಾಜಿ ಕೇಂದ್ರ ಸಚಿವ ನಾರಾಯಣಸ್ವಾಮಿ, ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಛಲವಾಧಿ ಟಿ. ನಾರಾಯಣಸ್ವಾಮಿ,ವಿಧಾನ ಪರಿಷತ್ ಡಿ.ಸಿ ತಮ್ಮಣ್ಣ, ಮಾಜಿ ಬಮೂಲ್ ಅಧ್ಯಕ್ಷ ಆರ್. ಕೆ. ರಮೇಶ್,ಹಿರಿಯ ನಿವೃತ್ತ ಐಎಎಸ್ ಅಧಿಕಾರಿ ಪಿ.ಎನ್ ಶ್ರೀನಿವಾಸಚಾರಿ, ಕೆ. ಎಸ್. ಪ್ರಭಾಕರ್ ರವರು ಐ.ಎ.ಎಸ್ ಪ್ರಧಾನ ಕಾರ್ಯದರ್ಶಿಗಳು, ವೈದ್ಯಕೀಯ ಶಿಕ್ಷಣ ಇಲಾಖೆ, ಸುಜ್ಞಾನ ಮೂರ್ತಿ ರವರು ಅಧ್ಯಕ್ಷರು ವಿಶ್ವಕರ್ಮ ನಿಗಮ ಮಂಡಳಿ ಭಾಗವಹಿಸಲಿದ್ದಾರೆ ಎಂದು ಹೇಳಿದರು. ಸರ್ವೇಶ್. ಜಿ ಧರ್ಮದರ್ಶಿಗಳು 

ರಾಮಯ್ಯ ಸ್ವಾಮಿಗಳು ಗೌರವ ಅಧ್ಯಕ್ಷರು 

ಮೋಹನ್ 

ಪ್ರದಾನ ಕಾರ್ಯದರ್ಶಿಗಳು 

ಕೇಶವಮೂರ್ತಿ 

ಕಾರ್ಯ ದರ್ಶಿಗಳು 

ಮುನಿರಾಜ್ 

ಕಾರ್ಯ ದರ್ಶಿಗಳು 

ರಾಮಾಚಾರಿ 

ಕಾರ್ಯದರ್ಶಿಗಳು

Comments

Popular posts from this blog