ದಲಿತ ಸಂಘರ್ಷ ಸಮಿತಿ - ಕರ್ನಾಟಕ  ಪತ್ರಿಕಾಗೋಷ್ಠಿ ಬ್ಯಾಂಗಲೋರ್ ಫಸ್ಟ್ ಕ್ಲಬ್ 

ಡಾ.ಬಿ.ಆ‌ರ್.ಅಂಬೇಡ್ಕರ್‌ರವರು ಸಂವಿಧಾನ ಕರಡು ರಚನ ಸಮಿತಿ ಅಧ್ಯಕ್ಷರಾಗಿ ಮಾನವೀಯತೆ, ಸಮಾನತೆ, ಭ್ರಾತೃತ್ವ, ಸ್ವಾತಂತ್ರ್ಯ, ಮತ್ತು ದೇಶದ ಸಾರ್ವಭೌಮತ್ವವನ್ನು ಸಾರುವ ಆಶಯಗಳ ಸಂವಿಧಾನವನ್ನು ರಚಿಸಿ ಸಂಸತ್ತಿಗೆ/ಕೇಂದ್ರ ಸರ್ಕಾರಕ್ಕೆ 1949ರಲ್ಲಿ ಅರ್ಪಿಸುವಾಗ "ಸಂವಿಧಾನದ ಆಶಯಗಳಾದ ಸಾಮಾಜಿಕ, ಆರ್ಥಿಕ-ಲಿಂಗ ಸಮಾನತೆಗಳನ್ನು ಅನುಷ್ಠಾನಗೊಳಿಸುವುದು ಕೇಂದ್ರ/ರಾಜ್ಯ ಸರ್ಕಾರಗಳ ಕರ್ತವ್ಯವಾಗಿದ್ದು ಅವುಗಳನ್ನು ಅನುಷ್ಠಾನಗೊಳಿಸದಿದ್ದಲ್ಲಿ ಭಾರತೀಯರು ಶೋಷಣೆಯಿಂದ ಮುಕ್ತರಾಗಲು ರಾಜಕೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಧಿಕ್ಕರಿಸುತ್ತಾರೆ. ಆ ರೀತಿ ಆಗದಂತೆ ಪ್ರಜಾಪ್ರಭುತ್ವವನ್ನು ಕಾಪಾಡಲು "ಸಂಪೂರ್ಣ ಸಮಾನತೆ'ಯನ್ನು ಸರ್ಕಾರಗಳು ಅನುಷ್ಠಾನಕ್ಕೆ ತರಬೇಕು. ಆದರೆ ಸರ್ಕಾರಗಳು ತಮ್ಮ ಕರ್ತವ್ಯ ನಿರ್ವಹಿಸುತ್ತಿಲ್ಲ. ಸರ್ಕಾರಗಳನ್ನು ಈ ಕುರಿತು ಆಗ್ರಹಿಸಲು ಅಹಿಂಸಾತ್ಮಕ ಪ್ರಜಾಸತ್ತಾತ್ಮಕ ಕಾನೂನಾತ್ಮಕ ಮಾರ್ಗಗಳಲ್ಲಿ ಚಳುವಳಿ/ಹೋರಾಟಗಳನ್ನು ಮಾಡುವ ನೈತಿಕ ಹೊಣೆಗಾರಿಕೆ ಜನರದ್ದು. ಅದಕ್ಕಾಗಿ ಜನರಿಗೆ ಹೋರಾಡುವ ಹಕ್ಕು/ಸ್ವಾತಂತ್ರ್ಯ/ಕರ್ತವ್ಯಗಳನ್ನು ಸಂವಿಧಾನದಲ್ಲಿ ನೀಡಲಾಗಿದೆ ಎಂಬ ಎಚ್ಚರಿಕೆಯ ಮಾತನ್ನು ಹೇಳಿ ಅಂಬೇಡ್ಕರರು ಪರಿನಿರ್ವಾಣ ಹೊಂದಿದ್ದಾರೆ.

ದಲಿತ ಸಂಘರ್ಷ ಸಮಿತಿಯು ಆರಂಭವಾಗಿ 50 ವರ್ಷಗಳು ಕಳೆದಿದ್ದು, ಅಂಬೇಡ್ಕರರು ಭೋಧಿಸಿದ ಹೋರಾಟದ ಮಾರ್ಗದಲ್ಲಿ ಚಳುವಳಿ ನಡೆಸಿ ಶೋಷಿತರ ಪರವಾಗಿ ಅನೇಕ ಕಾಯ್ದೆ/ನಿಯಮಗಳನ್ನೂ ಸರ್ಕಾರ ರೂಪಿಸುವಲ್ಲಿ ಯಶಸ್ವಿಯಾಗಿದೆ.


ಮೀಸಲಾತಿ ಹೆಚ್ಚಳ ರದ್ದು : ದಲಿತ ಚಳುವಳಿ ಆಗ್ರಹಕ್ಕೆ ಮಣಿದು ಕರ್ನಾಟಕ ಸರ್ಕಾರವು ಪ.ಜಾತಿ ಮತ್ತು ಪರಿಶಿಷ್ಟ


ಪಂಗಡಗಳ ಮೀಸಲಾತಿ ಪ್ರಮಾಣವನ್ನು ಕ್ರಮವಾಗಿ 15% ಯಿಂದ 17%ಗೆ ಮತ್ತು 3% ನಿಂತ 7%ಗೆ ಅಂದರೆ ಒಟ್ಟಾರೆ 15% ನಿಂದ 24%ಗೆ ಏರಿಕೆ ಮಾಡಿ ಒಟ್ಟಾರೆ ಜಾತಿ ಆಧಾರಿತ ಮೀಸಲಾತಿ ಪ್ರಮಾಣವನ್ನು 50%ನಿಂದ 56%ಗೆ ಏರಿಕೆ ಮಾಡಲು ನಿರ್ಧರಿಸಿತು. ರಾಜ್ಯ ಸರ್ಕಾರವು 23.10.22ರಲ್ಲಿ ಸುಗ್ರೀವಾಜ್ಞೆ ಹೊರಡಿಸಿ ನಂತರದಲ್ಲಿ 28.12.2022ರಲ್ಲಿ ಮೀಸಲಾತಿ ಏರಿಕೆಗಾಗಿ ಸರ್ಕಾರಿ ಆದೇಶ ಹೊರಡಿಸಿದ್ದು ನಂತರ ಈ ಕುರಿತು ಕಾಯ್ದೆಯು 12.1.2023ರಲ್ಲಿ ಗೆಜೆಟ್ ಪ್ರಕಟಣೆ ಆಯಿತು. ಈ ಕುರಿತು ಸದರಿ ಮೀಸಲಾತಿ ಏರಿಕೆ ವಜಾ ಕೋರಿ ಕೆಲವು ಮನುವಾದಿಗಳು KAT ಯಲ್ಲಿ ಮೊದಕ್ಕಮೆ ಹೂಡಿದ್ದು ಮಧು ಬಿ.ಎನ್.ವಿರುದ್ಧ ಕರ್ನಾಟಕ ಸರ್ಕಾರ ಪ್ರಕರಣ ತೀರ್ಪು ದಿನಾಂಕ: 28.5.2025ರಂದು KAT ಮೀಸಲಾತಿ ಏರಿಕೆಯನ್ನು ರದ್ದುಪಡಿಸಿದ್ದು, ಮಂಡಲ್ ವರದಿ ಸುಪ್ರೀಂ ಕೋರ್ಟು-2 ತೀರ್ಪುಗಳು (1992) ಬಾಲಾಜಿ ವಿರುದ್ಧ ಮೈಸೂರು ಸರ್ಕಾರ (1963)ರದಲ್ಲಿ ಜಾತಿ ಆಧಾರಿತ ಮೀಸಲಾತಿ 50% ಮೀರಬಾರದೆಂದು ಉಲ್ಲೇಖ ನೀಡಲಾಗಿದೆ. ಇದೀಗ ರಾಜ್ಯ ಸರ್ಕಾರವು ಹೈಕೋರ್ಟು/ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿ ಮೀಸಲಾತಿ ಏರಿಕೆ ಆದೇಶಗಳು ಮುಂದುವರಿಯುವಂತೆ ಕಾನೂನು ಕ್ರಮ ಕೈಗೊಳ್ಳಬೇಕು. ತಮಿಳುನಾಡು ಸರ್ಕಾರವೂ ತನ್ನ ರಾಜ್ಯದಲ್ಲೂ ಮೀಸಲಾತಿ ಪ್ರಮಾಣವನ್ನು 69%ಗೆ ನಿಗದಿಪಡಿಸಿ ಸದರಿ ಕಾಯ್ದೆಯನ್ನು ಕೇಂದ್ರವು ಸಂವಿಧಾನದ ಒಂಬತ್ತನೇ ಶೆಡ್ಯೂಲ್‌ಗೆ ಸೇರಿಸಿ ರಕ್ಷಿಸಿದ್ದು ಎಲ್ಲಾ ರಾಜ್ಯಗಳಿಗೂ ಮಾದರಿಯಾಗಿದೆ 50% ಮೀಸಲಾತಿ ಪ್ರಮಾಣವನ್ನು ಜಾತಿ ಶೋಷಿತರ ಜನಸಂಖ್ಯೆಯ ಪ್ರಮಾಣಕ್ಕನುಗುಣವಾಗಿ ಕನಿಷ್ಠ ಶೇಕಡ 75ಕ್ಕೆ ಏರಿಸಲು ಪೂರ್ವಭಾವಿಯಾಗಿ ಜಾತಿಗಳ ಜನಗಣತಿ ಕೈಗೊಂಡು, ಸಂವಿಧಾನಕ್ಕೆ ಸೂಕ್ತ ತಿದ್ದುಪಡಿ ತರುವುದು ಶಾಶ್ವತ ಪರಿಹಾರವಾಗಿದೆ. ದ.ಸಂ.ಸ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ/ಕೇಂದ್ರ ಸರ್ಕಾರಗಳನ್ನು ಆಗ್ರಹಿಸುತ್ತದೆ.


ಪಿ.ಟಿ.ಸಿ.ಎಲ್ ಸಮಸ್ಯೆ : 1950ರಿಂದ 1980ರ ದಶಕದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭೂಮಿಯನ್ನು ಬಡಗೇಣಿದಾರರಿಗೆ ಭೂ ಒಡೆತನ ನೀಡಲು ಇನಾಮು / ಜೋಡಿ ರದ್ದಿಯಾತಿ ಕಾಯ್ದೆ 1955, ಉಳುವವನೆ ಭೂಮಿಗೆ ಒಡೆಯ ಎಂದು ಭೂಸುಧಾರಣಾ ಕಾಯ್ದೆ 1961 ಜಾರಿಗೆ ತಂದವು. ಬಡತನ, ಅಸ್ಪೃಶ್ಯತೆಯ ದೌರ್ಜನ್ಯಗಳ ಕಾರಣದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಗೇಣಿದಾರರು ತಮಗೆ ಮಂಜೂರಾದ ಬೆಲೆ ಬಾಳುವ ತುಂಡು ಭೂಮಿಗಳನ್ನು ಚಿಲ್ಲರೆ ದುಡ್ಡಿಗೆ ಮಾರಿಕೊಂಡು ಮನೆ: ಕೃಷಿ ಕಾರ್ಮಿಕರು/ಜೀತಗಾರರಾದರು. ಈ ಶೋಷಣೆಯನ್ನು ತಪ್ಪಿಸಲು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಕೆಲವು ಭೂಮಿಗಳ ಪರಬಾರ ನಿಷೇಧ) ಅಧಿನಿಯಮ 1978 ಮತ್ತು ಅದರ ನಿಯಮಗಳು 1979 (ಪಿಟಿಸಿಎಲ್ ಕಾಯ್ದೆ)ಯನ್ನು ಜಾರಿಗೆ ತಂದು ಅದರಲ್ಲಿ ಸೆಕ್ಷನ್ 3 (1)(b) ಪ್ರಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮಂಜುರಾದ ದರಖಾಸ್ತು/ಸರ್ಕಾರಿ ಭೂಮಿ ಮತ್ತು ಸದರಿ ಕಾಯ್ದೆಗಳಡಿ ಗೇಣಿದಾರರಿಗೆ ಅಧಿಯೋಗದಾರಿಕೆ ಹಕ್ಕು ಮಂಜೂರಾದ ಭೂಮಿ, ಇತ್ಯಾದಿ (Certain Land) ಭೂಮಿಗಳು ಪಿಟಿಸಿಎಲ್ ಕಾಯ್ದೆಗೆ ಅರ್ಹ ಎಂದು ಸರ್ಕರವು ನ್ಯಾಯ ನೀಡಿತು. ಸರ್ಕಾರದ ದಲಿತ ಪರವಾದ ಪಿಟಿಸಿಎಲ್ ಕಾಯ್ದೆ ಮತ್ತು ಪರಿಶಿಷ್ಟ ಗೇಣಿದಾರರ ವಿರುದ್ಧ ಹೈಕೋರ್ಟು/ಸುಪ್ರೀಂ ಕೋರ್ಟು ತೀರ್ಪುಗಳು ಹೊರಬಿದ್ದಿವೆ. ಅವುಗಳಲ್ಲಿ ಹೈಕೋರ್ಟು ಪೂರ್ಣ ಪೀಠ ಪ್ರಕರಣ ಮಹಮ್ಮದ್ ಜಾಫರ್ ವಿರುದ್ಧ ಕರ್ನಾಟಕ ಸರ್ಕಾರ ಮತ್ತು ಈ ಕುರಿತು ಸುಪ್ರೀಂ ಕೋರ್ಟ್‌ನ (2023) ಮೇಲ್ಮನವಿಗಳಲ್ಲಿ ಭೂ ಸುಧಾರಣೆ ಕಾಯ್ದೆಯಡಿ ಪರಿಶಿಷ್ಟ ಗೇಣಿದಾರರು ಪಿಟಿಸಿಎಲ್‌ಗೆ ಅರ್ಹರಲ್ಲವೆಂದು ಮತ್ತು ಹೈಕೋರ್ಟಿನ ಪ್ರಕರಣ ಮುನಿಕೆಂಚಪ್ಪ ವಿರುದ್ಧ ಕರ್ನಾಟಕ ಸರ್ಕಾರ, ಹೈಕೋರ್ಟುನ ವಿಭಾಗೀಯ ಪೀಠದ ಪ್ರಕರಣ, ಜಿ.ಎನ್.ರಾಮಚಂದ್ರ (ಖರೀದಿದಾರ) ವಿರುದ್ಧ ಜಗದೀಶ್ (ಗ್ರಾಂಟಿ) ಮತ್ತು ಈ ಕುರಿತು ಸುಪ್ರೀಂ ಕೋರ್ಟ್ ಮೇಲ್ಮನವಿ ಜಗದೀಶ್ ವಿರುದ್ಧ ಜಿ.ಎನ್. ರಾಮಚಂದ್ರ (ಖರೀದಿದಾರ) ಪ್ರಕರಣ ತೀರ್ಮಗಳು ಪರಿಶಿಷ್ಟ ಗೇಣಿದಾರರ ವಿರುದ್ಧ ಬಂದಿದ್ದು ರಾಜ್ಯಾದ್ಯಂತ ಎಲ್ಲ 31 ಜಿಲ್ಲೆಗಳು AC/DC ಕೋರ್ಟುಗಳಲ್ಲಿ ಪರಿಶಿಷ್ಟ ಗೇಣಿದಾರರ ಸಾವಿರಾರು ಅರ್ಜಿಗಳು ವಜಾ ಆಗಿ ಅವರು ಸಾವಿರಾರು ಎಕರೆ ಭೂಮಿ ಕಳೆದುಕೊಂಡು ಬಡ ಕೂಲಿ ಕಾರ್ಮಿಕರಾಗಿದ್ದಾರೆ. ರಾಜ್ಯ ಸರ್ಕಾರವು ಪಿಟಿಸಿಎಲ್ ಕಾಯ್ದೆ ಕಲಂ 3(1) (b) ರಲ್ಲಿರುವ "ಗ್ರಾಂಟೆಡ್ ಲ್ಯಾಂಡ್" ಪದ ಕೈಬಿಟ್ಟು ಅದರ ಬದಲಾಗಿ ಪಿಟಿಸಿಎಲ್ ಕಾಯ್ದೆಯಲ್ಲಿ ಬಳಸಿರುವ "Certain Land" ಎಂಬ ಪದವನ್ನು ಬಳಸಿ ತಿದ್ದುಪಡಿ ಮಾಡಿದಲ್ಲಿ ಸಾವಿರಾರು ಪರಿಶಿಷ್ಟ ಗೇಣಿದಾರರು ತಾವು ಕಳೆದುಕೊಂಡ ಬೆಲೆ ಬಾಳುವ ಭೂಮಿಗಳನ್ನು ಮರಳಿ ಪಡೆಯುತ್ತಾರೆ. ಪಿಟಿಸಿಎಲ್ ಕಲಂ 5 ರಲ್ಲಿ ಮೊದಲ ಬಾರಿಗೆ ಏಸಿ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ಕಾಲಮಿತಿ ಅನ್ವಯಿಸಬೇಕು ಮತ್ತು ತಡವಾಗಿ ಸಲ್ಲಿಸುವ ಅರ್ಜಿಗಳನ್ನು ವಜಾ ಮಾಡಬೇಕೆಂದು ಸುಪ್ರೀಂ ಕೋರ್ಟ್‌ ನೆಕ್ಕಂಟಿ ರಾಮಲಕ್ಷ್ಮೀ ವಿರುದ್ಧ ಕರ್ನಾಟಕ ಸರ್ಕಾರ ತೀರ್ಮ ನೀಡಿದಾಗ (2017) ಪರಿಶಿಷ್ಟರು ನಡೆಸಿದ ಹೋರಾಟಗಳಿಗೆ ಮಣಿದು ರಾಜ್ಯ ಸರ್ಕಾರ 2023 ರಲ್ಲಿ ಕಲಂ 05ಕ್ಕೆ (1) ಮತ್ತು (d) ಎಂದು ತಿದ್ದುಪಡಿ ತಂದು ಆದೇಶಿಸಿತು. ಹೈಕೋರ್ಟ್ ವಿಭಾಗೀಯ ಪೀಠವು ಗೌರಮ್ಮ ವಿರುದ್ಧ ಜಿಲ್ಲಾಧಿಕಾರಿ ಪ್ರಕರಣದಲ್ಲಿ ( 2024) ಸುಪ್ರೀಂ ಕೋರ್ಟ್ ಭಾರತ ಸರ್ಕಾರ ವಿರುದ್ಧ ಎಸ್. ಮುರುಗೇಶನ್ (2022) ತೀರ್ಪನ್ನು ಸಮೂದಿಸಿ ರಾಜ್ಯ ಸರ್ಕಾರದ 2023 ರ ತಿದ್ದುಪಡಿ ಸಮಂಜಸವಾಗಿಲ್ಲವೆಂದು Unduedaley laches, acquiescence ಸಮಸ್ಯೆಗಳು ತಿದ್ದುಪಡಿಯಲ್ಲಿ ಇಲ್ಲವಾಗಿ ಪರಿಶಿಷ್ಟರು ತಡವಾಗಿ ಅರ್ಜಿ ಸಲ್ಲಿಸಿದ್ದಲ್ಲಿ ವಜಾ ಮಾಡಬೇಕೆಂದು ತೀರ್ಪು ನೀಡಿದ್ದು AC/DC ಕೋರ್ಟುಗಳು ರಾಜ್ಯಾದ್ಯಂತ ಅರ್ಜಿಗಳನ್ನು ವಜಾ ಮಾಡುತ್ತಿವೆ. "ಕೈಗೆ ಬಂದು ತುತ್ತು ಬಾಯಿಗೆ ಬರಲಿಲ್ಲ" ಎಂಬಂತಾಗಿದೆ. ಕಲಂ 5ಕ್ಕೆ ಮತ್ತೊಂದು ಹೊಸ ತಿದ್ದುಪಡಿ ತರುವ ಮೂಲಕ ರಾಜ್ಯ ಸರ್ಕಾರವು ಪಿಟಿಸಿಎಲ್‌ ಅರ್ಜಿದಾರರ ಭೂಮಿ ಮರಳಿ ಪಡೆಯಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇವೆ.

ದಸಂಸ-ಕರ್ನಾಟಕವು ಸದರಿ ತಿದ್ದುಪಡಿ ತರಲು ಮಾನ್ಯ ಮುಖ್ಯಮಂತ್ರಿಗಳು, ಮಾನ್ಯ ಕಂದಾಯ ಸಚಿವರು, ಮಾನ್ಯ ಸಮಾಜ ಕಲ್ಯಾಣ ಸಚಿವರು ಮತ್ತು ರಾಜ್ಯ ಸರ್ಕಾರವು ಈ ಕುರಿತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತದೆ. ರಾಜ್ಯಾದ್ಯಂತ ಸುಮಾರು 225 ತಾಲ್ಲೂಕು ಕೇಂದ್ರಗಳ ಮತ್ತು 31 ಜಿಲ್ಲಾ ಕೇಂದ್ರಗಳಲ್ಲಿ ಸಂಘಟನೆಯಿಂದ ಮನವಿ ಪತ್ರ ಸಲ್ಲಿಕೆ-ಧರಣಿ /ಹೋರಾಟಗಳನ್ನು ಆರಂಭಿಸಲಾಗಿದೆ. ಈ ಕುರಿತು ನಮ್ಮ ಸಂಘಟನೆಯಿಂದ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿದ್ದು ಇದರಲ್ಲಿ ನಾಡಿನ ತಜ್ಞ ಹಿರಿಯ ಹೋರಾಟಗಾರರು, ತಜ್ಞ ವಕೀಲರು, ಪ್ರಗತಿಪರ ರಾಜಕೀಯ ಮುಖಂಡರು ಭಾಗವಹಿಸುತ್ತಾರೆ. ಶೋಷಿತರ ಪರವಾದ ಎಲ್ಲರೂ ನೂರಾರು ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಲಾಗಿದೆ.

Comments

Popular posts from this blog