79 ನೇ ಸ್ವಾತಂತ್ರೋತ್ಸವದ ಅಂಗವಾಗಿ ಮುಂಜಾನೆ  ಕೆಎಂಡಿಸಿ ಭವನದಲ್ಲಿ ಕರ್ನಾಟಕ ರಾಜ್ಯ ಅಲ್ಪ ಸಂಖ್ಯಾತರ ಆಯೋಗದ ಅಧ್ಯಕ್ಷರಾದ ಶ್ರೀ ಯು.ನಿಸಾರ್ ಅಹ್ಮದ್, ಭಾಪೊಸ (ನಿ) ರವರು ಧ್ವಜಾರೋಹಣವನ್ನು ನೆರವೇರಿಸಿದರು

 ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಶಿಕ್ಷಣದ ಮಹತ್ವವನ್ನು ತಿಳಿಸುತ್ತಾ ಶಿಕ್ಷಣದಿಂದ ಮಾತ್ರ ವ್ಯಕ್ತಿಯ ಹಕ್ಕುಗಳ ಪರಿಜ್ಞಾನ ಉಂಟಾಗುತ್ತದೆ ಈ ನಿಟ್ಟಿನಲ್ಲಿ ದೇಶವನ್ನು ಅಭಿವೃದ್ಧಿಪರವನ್ನಾಗಿ ಮಾಡಲು ಪ್ರತಿಯೊಬ್ಬರೂ ಸಹ ಶೈಕ್ಷಣಿಕವಾಗಿ ಸದೃಢವಾಗಿರಬೇಕೆಂದು ತಿಳಿಸಿದರು. ಭಾರತ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ವಿಶೇಷವಾಗಿ ಶಿಕ್ಷಣವು ಪ್ರಮುಖ ಪಾತ್ರವಹಿಸಿದ್ದು ಶಿಕ್ಷಣದಿಂದ ಸ್ವಾತಂತ್ರ್ಯ ಎಂಬುದರ ಸ್ಪಷ್ಟ ನಿದರ್ಶನವಾಗಿದೆ ಎಂದು ತಿಳಿಸಿದರು.

ಆಯೋಗದ ಕಾರ್ಯದರ್ಶಿಗಳಾದ ಡಾ ಮಾಜುದ್ದೀನ್ ಖಾನ್ ರವರು ಮಾತನಾಡಿ, ಭಾರತವು ವಿಕಸಿತ ಭಾರತವಾಗಿ ಅಭಿವೃದ್ಧಿಯಾಗುವ ನಿಟ್ಟಿಯಲ್ಲಿ ನಮ್ಮೆಲ್ಲರ ವೈಯಕ್ತಿಕ ಕೊಡುಗೆ ಅತ್ಯಗತ್ಯ ಕರ್ನಾಟಕ ರಾಜ್ಯ ದೇಶದ ಅಭಿವೃದ್ಧಿಯಲ್ಲಿ ತನ್ನದೇ ಯಾದ ವಿಶಿಷ್ಟ ಕೊಡುಗೆಯನ್ನು ನೀಡುತ್ತಿದ್ದು ವಿಶೇಷವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ, ನವೋದ್ಯಮ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.


ಕರ್ನಾಟಕ ಉರ್ದು ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಮೊಹಮದ್ ಅಲಿ ಖಾಜಿ ರವರು ಮಾತನಾಡುತ್ತಾ ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರದಲ್ಲಿ ಎಲ್ಲಾ ಜನರ ಸಾಮಾಜಿಕ ಸಾಮರಸ್ಯದಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಇದಕ್ಕಾಗಿ ಸರ್ವರೂ ಸರ್ವರ ಒಳಿತಿಗಾಗಿ ಶ್ರಮಿಸಿ ಉತ್ತಮ ರಾಷ್ಟ್ರ ನಿರ್ಮಾಣ ಮಾಡಬೇಕೆಂದರು.

ಕರ್ನಾಟಕ ರಾಜ್ಯ ಕ್ರೈಸ್ತ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಡಾ. ಎಸ್ ಜಾಫೆಟ್ ರವರು ಮಾತನಾಡಿ, ಸ್ವಾತಂತ್ರ್ಯದ ಮಹತ್ವ ಹಾಗೂ ದೇಶದ ಸರ್ವ ಪ್ರಜೆಗಳ ಏಳಿಗೆಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗಿದೆ ಎಂದರು.

ಕಾರ್ಯಕ್ರಮದ ಕೊನೆಯಲ್ಲಿ 'ವಿಕಸಿತ ಭಾರತ 'ಅಭಿವೃದ್ಧಿ ಹೊಂದಿದ ಭಾರತ' 2047 ರಲ್ಲಿ ಸ್ನಾತಂತ್ರದ 100 ನೇ ವಾರ್ಷಿಕೋತ್ಸವದ ವೇಳೆಗೆ ಭಾರತವನ್ನು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಧೈಯದೊಂದಿಗೆ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಯಿತು.

ಈ ಸಂದರ್ಭದಲ್ಲಿ ಕೆಎಂಡಿಸಿ ವ್ಯವಸ್ಥಾಪಕ ನಿರ್ದೇಶಕರಾದ ಡಾ || ಅಫೈಲ್ ಪಾಷಾ, ಕ್ರೈಸ್ತ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಅಂಥೋನಿ, ಆಯೋಗದ ಮಾನ್ಯ ಸದಸ್ಯರಾದ ಶ್ರೀ ಮೊಹಮದ್ ಇಸ್ಮಾಯಿಲ್, ಶ್ರೀ ಕೆ.ಆರ್. ಜೋಬಿ, ಶ್ರೀ ವಾಂಗ್ರೆಸ್ ಜ್ಯೋತಿ, ಉರ್ದು ಅಕಾಡೆಮಿಯ ಸದಸ್ಯರಾದ ಡಾ. ಅಬ್ರರ್ ಸೈಯಿದಾ ಖಾನಂ ಡಾ. ಶಾಯಿಸ್ತಾ ಯೂಸೂಫ್ ಮತ್ತು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ಉರ್ದು ಅಕಾಡೆಮಿ ಗಳ ಅಧಿಕಾರಿ/ ಸಿಬ್ಬಂದಿಗಳು ಹಾಜರಿದ್ದರು.

Comments

Popular posts from this blog