ಪೀಣ್ಯ 2ನೆ ಹಂತ ಜಿಕೆಡಬ್ಲು ಮೈದಾನದಲ್ಲಿ ಜಂಬೋ ಸರ್ಕಸ್ ಮತ್ತು ದೇಶ ವಿದೇಶಗಳ ಹೆಸರಾಂತ ಕಲಾವಿದರ ಮೈನವಿರೇಳಿಸುವ ಪ್ರದರ್ಶನ
ಬೆಂಗಳೂರಿನ ಪೀಣ್ಯ 2ನೇ ಹಂತ ಜಿಕೆಡಬ್ಲು ಮೈದಾನದಲ್ಲಿ ದೇಶ ವಿದೇಶಗಳ ಹೆಸರಾಂತ ಕಲಾವಿದರ ತಂಡದಿಂದ ಕೂಡಿದ ಜಂಬೋ ಸರ್ಕಸ್ ರೋಚಕ ಮತ್ತು ಅದ್ಭುತ ಪ್ರದರ್ಶನ.
ಸರ್ಕಸ್ ನ ಪ್ರಮುಖ ಆಕರ್ಷಣೆಯಾದ ಪ್ರಾಣಿಗಳ ಪ್ರದರ್ಶನ ನಿಷೇಧದ ನಂತರ ಸರ್ಕಸ್ ಇನ್ನಷ್ಟು ಜನಪ್ರಿಯಗೊಳಿಸುವ ಉದ್ದೇಶದಿಂದ ರಷ್ಯಾ ಸಹಿತ ವಿವಿಧ ದೇಶಗಳ ಕಲಾವಿದರನ್ನು ಬಳಸಿಕೊಂಡು ಸರ್ಕಸ್ ಪ್ರದರ್ಶನ ನೀಡುವ ಮೂಲಕ ಸರ್ಕಸ್ ನ ಜನಾಕರ್ಷಣೆ ಹೆಚ್ಚಿಸುವ ಕಾರ್ಯದಲ್ಲಿ ಜಂಬೋ ಸರ್ಕಸ್ ಮುಂಚೂಣಿಯಲ್ಲಿದೆ ಎಂದು ಜೊಬೋ ಸರ್ಕಸ್ ಮ್ಯಾನೇಜರ್ ಟೈಟಸ್ ವರ್ಗೀಸ್ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.1977 ರ ಅಕ್ಟೋಬರ್ 2 ಗಾಂಧಿ ಜಯಂತಿಯಂದು ಬಿಹಾರದ ಧಾನಪುರದಲ್ಲಿ ಎಂ.ವಿ.ಶಂಕರನ್ ಅವರ ನೇತೃತ್ವದಲ್ಲಿ ಆರಂಭವಾದ ಜಂಬೋ ಸರ್ಕಸ್ ನ ಪ್ರಥಮ ಪ್ರದರ್ಶನ ಆರಂಭವಾಯಿತು.
ಅಂದಿನಿಂದ ಇಂದಿನವರೆಗೂ ಜಂಬೋ ಸರ್ಕಸ್ ದೇಶ ವಿದೇಶಗಳಲ್ಲಿ ಸಾವಿರಾರು ಪ್ರದರ್ಶನ ನೀಡುವ ಮೂಲಕ ಸರ್ಕಸ್ ಕಲೆಯನ್ನು ಜೀವಂತವಾಗಿ ಉಳಿಸಿದೆ ಇಂದು ಎಂ.ವಿ.ಶಂಕರ್ ಅವರ ಪುತ್ರರಾದ ಅಜಯ್ ಶಂಕರ್ ಹಾಗೂ ಅಶೋಕ್ ಶಂಕರ್ ಜಂಬೋ ಸರ್ಕಸ್ ಮುಂದುವರಿಸುವ ಮೂಲಕ ತಮ್ಮ ತಂದೆಯ ಹೆಸರಿಗೆ ಕೀರ್ತಿ ತಂದಿದ್ದಾರೆ.
ಬೆಂಗಳೂರು ನಾಗರಿಕರಿಗೆ ಪರಿಶುದ್ದ ಮನರಂಜನೆ ನೀಡುವ ಉದ್ದೇಶದಿಂದ. ಬೆಂಗಳೂರಿನ ಪೀಣ್ಯ ನೇ ಹಂತ ಜಿಕೆಡಬ್ಲು ಮೈದಾನದಲ್ಲಿ ಜಂಬೋ ಸರ್ಕಸ್ ಪ್ರದರ್ಶನ ಆರಂಭವಾಗಿ ಸರ್ಕಸ್ ಪ್ರಿಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ ಎಂದು ಸರ್ಕಸ್ ಮ್ಯಾನೇಜರ್ ಟೈಟಸ್ ವರ್ಗೀಸ್ ಹೇಳಿದರು.
ಪೀಣ್ಯ ಸೆಕೆಂಡ್ ಸ್ಟೇಜ್ ಜಿಕೆಡಬ್ಲು ಮೈದಾನದಲ್ಲಿ ಪ್ರದರ್ಶನವಾಗಿತ್ತಿರುವ ಜಂಬೋ ಸರ್ಕಸ್ ನಲ್ಲಿ ರಷ್ಯಾ, ತಾಂಜೇನಿಯಾ, ಇಥಿಯೋಪಿಯ ಹಾಗೂ ಭಾರತದ ವಿವಿಧ ಭಾಗದ ಹೆಸರಾಂತ ಕಲಾವಿದರು ನೀಡುವ ವೈವಿಧ್ಯಮಯ ರೋಮಾಂಚನಕಾರಿ ಸಾಹಸ ಪ್ರದರ್ಶನ ವಿಶೇಷ ಆಕರ್ಷಣೆಯಾಗಿದೆ ಎಂದು ಟೈಟಸ್ ವರ್ಗೀಸ್ ಹೇಳಿದರು.
ಪ್ರತಿದಿನ ಮೂರು ಪ್ರದರ್ಶನ ನಡೆಯಲಿದೆ ಎಂದು ಅವರು ಹೇಳಿದರು.
ಜಂಬೋ ಸರ್ಕಸ್ ನಲ್ಲಿ ಭಾರತ, ತಾಂಜಾನಿಯ, ಇಥಿಯೋಪಿಯಾ ಸಹಿತ ವಿವಿಧ ದೇಶ ವಿದೇಶಗಳ 100 ಮಂದಿ ಕಲಾವಿದರಿದ್ದು ಅವರಲ್ಲಿ 60 ಮಂದಿ ಮಹಿಳಾ ಕಲಾವಿದರು ಹಾಗೂ 40 ಮಂದಿ ಪುರುಷ ಕಲಾವಿದರು ವೈವಿಧ್ಯಮಯ ಸಾಹಸ ಪ್ರದರ್ಶನ ನೀಡುವ ಮೂಲಕ ಸರ್ಕಸ್ ಪ್ರಿಯರನ್ನು ರಂಜಿಸುತ್ತಾರೆ
ಟೈಟಸ್ ವರ್ಗೀಸ್ ಹೇಳಿದರು.








Comments
Post a Comment