ಜನಮನಗೆದ್ದ ನೃತ್ಯಂ ದಾಸ ಸಾಹಿತ್ಯ ಚಿಂತನ ಕಳೆದ ವಾರಾಂತ್ಯದಲ್ಲಿ ಬೆಂಗಳೂರಿನ ಕೈಲಾಸ ಕಲಾಧರ ಸಂಸ್ಥೆಯು ನಡೆದಿದ್ದ ಡಾ. ಕೆ .ಜಯಲಕ್ಷ್ಮೀ ಜಿತೇಂದ್ರ 

ಅವರ ಶಿಷ್ಯರಾದ ಕು. ರಾಘವೀ ರಾಮಕುಮಾರ್ ಮತ್ತು ಕು. ರೋಶಿಣಿ ಮುರಳಿ ಅವರ ಭರತನಾಟ್ಯ ರಂಗವೇದಾರ್ಚನೆ ಕಾರ್ಯಕ್ರಮವು ಅತ್ಯುತ್ತಮವಾಗಿ ಪ್ರಸ್ತುತಪಡಿಸಿತು. ನಮ್ಮ ನಾಡಿನ ಹಲವು ಹರಿದಾಸರ ರಚನೆಯ ಗುಚ್ಛವನ್ನು ಸೃಜನಾತ್ಮಕವಾಗಿ ನೃತ್ಯದಲ್ಲಿ ಅಳವಡಿಸಿದ್ದು ಸ್ತುತ್ಯಾರ್ಹ.

ಕಡೆಯಲ್ಲಿ ಗೋಪಿಕಾ ಸ್ತ್ರೀಯರೊಡನೆ ಯಶೋಧಾ ನಂದನ ಕೃಷ್ಣನು ಪ್ರದರ್ಶನ ಮಧ್ಯದಿಂದಲೇ ಆಗಮಿಸಿ ವೇದಿಕೆ ಏರಿದ್ದು ಎಲ್ಲ ಕಲಾರಸಿಕರಿಗೆ ರೋಮಾಂಚನವಾದದ್ದು ಸುಳ್ಳಲ್ಲ. ನಂತರದಲ್ಲಿ ಬಂದ ದಾಸ ಸಮೂಹ ಎಲ್ಲರನ್ನೂ ಭಾವ ಪರವಶ ಸನ್ನಿವೇಶ ಮಾಡಿತು. ನಮ್ಮ ಕನ್ನಡ ನಾಡಿನ ಹೆಮ್ಮೆಯ ರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಸ್ಥಾನದಲ್ಲಿ ರಚಿಸಿದ್ದ ಚಾಮುಂಡೇಶ್ವರಿ ದೇವಿ ಕುರಿತಾದ ದರುವರ್ಣ ಪ್ರಸ್ತುತಿಗೆ ಎಲ್ಲರೂ ತಲೆದೂಗಿದರು.  

ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಶ್ರೀಯುತ ಬಿ.ಎಸ್.ನೀಲಕಂಠಯ್ಯ ಅವರು ಮಾತನಾಡಿ, ವಿದ್ವಾನ್ಮೇಳದಲ್ಲಿದ್ದ ಶ್ರೀಮತಿ ಭಾರತಿ ವೇಣುಗೋಪಾಲ್ , ಶ್ರೀ ಸಿ. ಮಧುಸೂದನ್, ಎನ್ ವಿದ್ಯಾಶಂಕರ್, ಸುಮಧುರ್ ಆನೂರು, ಪ್ರಣವ್ ಕೌಶಿಕ್ ಈ ಎಲ್ಲಾ ಸಂಗೀತಜ್ಞರನ್ನು ಶ್ಲಾಘಿಸಿದರು.

ಯೋಗ ನಿಪುಣರಾದ ಶ್ರೀಯುತ ಮೋಹನರಮಣ ಅವರು ಮಾತನಾಡಿ ನಾಟ್ಯವು ಒಂದು ಯೋಗ, ನಮ್ಮ ಪರಂಪರೆಯಲ್ಲಿರುವ ಆಧ್ಯಾತ್ಮಿಕತೆಗೆ ಬಹು ಮುಖ್ಯ ಕೊಂಡಿ ಈ ಭರತನಾಟ್ಯ ಎಂದು ನೃತ್ಯ ನೃತ್ಯಪಟುಗಳನ್ನು ಹಾಗೂ ಗುರುಗಳನ್ನು ಅಭಿನಂದಿಸಿದರು.

Comments

Popular posts from this blog