28ನೇ ರಾಜ್ಯಮಟ್ಟದ ಅಂತರ ಶಾಲಾ ಬಾಲಕ, ಬಾಲಕಿಯರ ವಾಲಿಬಾಲ್ ಚಾಂಪಿಯನ್ ಶಿಪ್ ಬಾಂಧವ ಕೌನ್ಸಿಲರ್ ಕಪ್-2025
ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣ ಅಂತರಾಷ್ಟ್ರೀಯ ಕ್ರೀಡಾಂಗಣವಾಗಿ ರೂಪಿಸಲು ಹೆಚ್ಚಿನ ಅನುದಾನ ನೀಡಿಕೆ*
*ಸರ್ಕಾರಿ ಶಾಲಾ ಮಕ್ಕಳಿಗೆ ಹೈಟೆಕ್ ಶಿಕ್ಷಣ, ಕ್ರೀಡೆಯಲ್ಲಿ ಪ್ರೋತ್ಸಹ, ನಮ್ಮ ಶಾಲೆಯ ಮಕ್ಕಳು ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕ ಗೆಲ್ಲಬೇಕು-ಸಚಿವ ರಾಮಲಿಂಗಾರೆಡ್ಡಿ*
ಜಯನಗರ: ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ 28ನೇ ರಾಜ್ಯಮಟ್ಟದ ಅಂತರಶಾಲಾ ವಾಲಿ ಬಾಲ್ ಚಾಂಪಿಯನ್ ಶಿಪ್ ಬಾಲಕ, ಬಾಲಕಿಯರ ಬಾಂದವ ಕೌನ್ಸಲಿರ್ ಕಪ್-2025ಮೂರು ದಿನಗಳ ಕಾಲ ನಡೆಯಲಿದೆ.
ಉದ್ಘಾಟನೆಯನ್ನು ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿರವರು, ಅವಧೂತ ವಿನಯ್ ಗುರೂಜಿರವರು, ಶಾಸಕಿ, ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಸೌಮ್ಯರೆಡ್ಡಿ, ಆಡಳಿತ ಪಕ್ಷದ ಮಾಜಿ ನಾಯಕ, ಬಾಂಧವ ಸಂಸ್ಥೆ ಸಂಸ್ಥಾಪಕ.ನಾಗರಾಜುರವರು, ಪದ್ಮನಾಭನಗರ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಪ್ರಮೋದ್ ಶ್ರೀನಿವಾಸ್ ರವರು ವಾಲಿಬಾಲ್ ಚೆಂಡು ಹೊಡೆಯುವ ಮೂಲಕ ನಂತರ ದೀಪ ಬೆಳಗಿಸಿ ಉದ್ಘಾಟಿಸಿದರು.
*ಸಚಿವ ರಾಮಲಿಂಗಾರೆಡ್ಡಿ* ರವರು ಮಾತನಾಡಿ ನಾವು ಸಸಿ ನೆಟ್ಟ ಮೇಲೆ ಗಿಡವಾಗಬೇಕಾದರೆ ನೀರು, ಬಿಸಿಲು, ನೆರಳು ಎಲ್ಲವು ಸರಿಯಾಗಿ ಇದ್ದಾಗ ದೊಡ್ಡದಾಗಿದೆ ಮರವಾಗಿ ಬೆಳೆಯುತ್ತದೆ ಅದೇ ರೀತಿ ಚಿಕ್ಕ ವಯಸ್ಸಿನ ಮಕ್ಕಳಿಗೆ ಉತ್ತಮ ಶಾಲೆ, ಗುರುಗಳ ಮಾರ್ಗದರ್ಶನದಿಂದ ಒಳ್ಳೆಯ ವಿದ್ಯಾರ್ಥಿಯಾಗಿ ರೂಪಗೊಳ್ಳಬಹುದು, ಮಾನಸಿಕ, ದೃಢವಾಗಿ ಆರೋಗ್ಯವಂತರಾಗಿ ಇರಬೇಕು ಎಂದರೆ ಕ್ರೀಡಾ ಚಟುವಟಿಕೆ ಮುಖ್ಯ.
ನಮ್ಮ ಬಿಟಿಎಂ ಮತ್ತು ಜಯನಗರ ಸರ್ಕಾರಿ ಶಾಲೆಯ ಮಕ್ಕಳ ಹೈಟೆಕ್ ಶಾಲೆ ನಿರ್ಮಿಸಿ, ಶ್ರೀಮಂತರ ಮಕ್ಕಳಿಗೆ ಸಿಗುವ ಶಿಕ್ಷಣದಲ್ಲಿ ಸೌವಲತ್ತು, ಸರ್ಕಾರಿ ಮಕ್ಕಳಿಗೆ ಸಿಗುವ ಸೌಲಭ್ಯಗಳು.
ಮಕ್ಕಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಂಗಣದಲ್ಲಿ ತರಭೇತಿ ಪಡೆಯಲು ಅನುಕೂಲವಾಗಲಿ ಎಂದು ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಅನುದಾನ ನೀಡಲಾಗುವುದು.
*ಅವಧೂತ ವಿನಯಗುರೂಜಿ* ರವರು ಮಾತನಾಡಿ ಮಕ್ಕಳು ದೇವರ ಸಮಾನ ಅವರನ್ನ ಪ್ರೀತಿ, ವಿಶ್ವಾಸದಿಂದ ಬೆಳಸಬೇಕು, ತಂದೆ, ತಾಯಿ ಮತ್ತು ಸಮಾಜದಿಂದ ಮಕ್ಕಳಿಗೆ ಪ್ರೀತಿ, ವಿಶ್ವಾಸ ಸಿಕ್ಕಾಗ ಮಕ್ಕಳು ಕೆಟ್ಟದಾರಿಗೆ ಹೋಗುವುದಿಲ್ಲ.
ಮಕ್ಕಳ ಕ್ರೀಡಾಸಕ್ತಿ ಬೆಳಸಬೇಕು, ತಂದೆ, ತಾಯಿ ಮತ್ತು ಶಿಕ್ಷಕರು ಮಕ್ಕಳಿಗೆ ಯಾರ ಕ್ರೀಡೆಯಲ್ಲಿ ಆಸಕ್ತಿ ಇದೆ ಎಂಬುದು ತಿಳಿದು ಬಂದಿದೆ ಅವರಿಗೆ ತೊಡಗಿಸಿಕೊಳ್ಳಲು ಪೇರಣೆ ನೀಡಲಾಗಿದೆ.
ಕ್ರೀಡೆಗೆ ಪ್ರೋತ್ಸಾಹ, ಸಹಕಾರ ಸಿಕ್ಕಾಗ ನಮ್ಮ ಮಕ್ಕಳು ಸಹ ಒಲಂಪಿಕ್ , ಏಷಿಯಡ್ ಗೇಮ್ಸ್ ನಲ್ಲಿ ಪದಕ ಗೆಲ್ಲಲು ಸಾಧ್ಯ ಎಂದು ಹೇಳಿದರು.
*ಬಾಂಧವ ಅಧ್ಯಕ್ಷರಾದ ಎನ್.ನಾಗರಾಜುರವರು* ಮಾತನಾಡಿ ಬಾಂಧವ ಸಾಮಾಜಿಕ ಸೇವಾ ಸಂಸ್ಥೆಯು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಪರಿಸರ ಜಾಗೃತಿ ಕುರಿತು ನಿರಂತರ ಕಾಳಜಿವಹಿಸಿ ಶ್ರಮಿಸುತ್ತಿದೆ.
ನಮ್ಮ ಸಂಸ್ಥೆಯ ವತಿಯಿಂದ ಮಕ್ಕಳಿಗೆ ಉತ್ತಮ ಶಿಕ್ಷಣಕ್ಕೆ ಪ್ರೋತ್ಸಹ ಜೊತೆಯಲ್ಲಿ ಕ್ರೀಡಾಸಕ್ತಿ ಬೆಳಸುತ್ತಿದೆ. ಚಿಕ್ಕ ಮಕ್ಕಳು ದೃಢವಾಗಿ ಶಕ್ತಿವಂತರಾಗಬೇಕು, ಸಶಕ್ತ, ಮಕ್ಕಳು ಇದ್ದಾಗ ದೇಶ ಕಟ್ಟುವಲ್ಲಿ ಸಹಕಾರಿಯಾಗುತ್ತದೆ.
ರಾಜ್ಯಾದ್ಯಂತ 200ಕ್ಕೂ ಹೆಚ್ಚು ಶಾಲಾ ತಂಡಗಳು 3500 ಮಕ್ಕಳು ಮೂರು ದಿನಗಳ ಕಾಲ ಬಾಲಕ-ಬಾಲಕಿಯರು ಈ ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.
ಗೆದ್ದ ತಂಡಗಳಿಗೆ ಪಾರಿತೋಷಕ ಮತ್ತು ಪ್ರಮಾಣಪತ್ರ ಮತ್ತು ಹಿರಿಯ ವಾಲಿಬಾಲ್ ಆಟಗಾರರಿಗೆ ಗೌರವಿಸಿ ಸನ್ಮಾನಿಸಲಾಗುತ್ತಿದೆ ಎಂದರು



Comments
Post a Comment