ಗ್ರಾಮೀಣ ಪ್ರದೇಶಗಳಲ್ಲಿ ಕ್ಯಾಟರ್ಯಾಕ್ಟ್ ಸರ್ಜರಿ ಪ್ರಕರಣಗಳಲ್ಲಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ರೋಬೋಟಿಕ್ ಕ್ಯಾಟರ್ಯಾಕ್ಟ್ ಸರ್ಜರಿ ಆರಂಭಿಸಿದ ಡಾ.ಅಗರ್ವಾಲ್ಸ್ ಐ ಹಾಸ್ಪಿಟಲ್


ក, យោ 5. 2025 ಕರ್ನಾಟಕದಲ್ಲಿ 50 ಹಾಗೂ ಹೆಚ್ಚಿನ ವಯಸ್ಸಿನ ಜನರಲ್ಲಿ ತಡೆಯಬಹುದಾದ ದೃಷ್ಟಿ ನಷ್ಟಕ್ಕೆ ಕ್ಯಾಟರ್ಯಾಕ್ಟ್ ಅತ್ಯಂತ ಸಾಮಾನ್ಯ ಕಾರಣವಾಗಿದೆ. ರೋಗ ಪತ್ತೆಯಲ್ಲಿ ವಿಳಂಬ ಮತ್ತು ಸಕಾಲಕ್ಕೆ ಚಿಕಿತ್ಸೆಯ ಲಭ್ಯತೆ ಕಡಿಮೆ ಇರುವುದರಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ನೇತ್ರಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ. ಪ್ರಕರಣವು ಉಲ್ಬಣವಾದರೆ, ಕ್ಯಾಟರಾಕ್ಷನಿಂದ ಸಂಪೂರ್ಣ ದೃಷ್ಟಿ ನಷ್ಟವಾಗಬಹುದು, ಹೀಗಾಗಿ, ಮೊದಲೇ ಚಿಕಿತ್ಸೆ ಅಗತ್ಯವಿದೆ. 2022-23 ರಲ್ಲೇ ಇಡೀ ರಾಜ್ಯದಲ್ಲಿ 4.2 ಲಕ್ಷ ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದ್ದು, ಪರಿಸ್ಥಿತಿಯ ತೀವ್ರತೆಯನ್ನು ಇದು ಸೂಚಿಸುತ್ತದೆ.

ಭಾರತದ ವೃದ್ಧರಲ್ಲಿ ತಡೆಯಬಹುದಾದ ದೃಷ್ಟಿ ಸಮಸ್ಯೆಯಲ್ಲಿ ಕ್ಯಾಟರ್ಯಾಕ್ಟ್ 60% ರಷ್ಟಕ್ಕೆ ಕಾರಣವಾಗಿದೆ. ಇದರಿಂದ ದೇಶದ ಅತ್ಯಂತ ಪ್ರಮುಖ ಕಣ್ಣಿನ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಮೊದಲೇ ರೋಗ ಪತ್ತೆ ಮಾಡುವುದು ಮತ್ತು ಚಿಕಿತ್ಸೆಯ ಬಗ್ಗೆ ಜಾಗೃತಿ ಹೆಚ್ಚುತ್ತಿದ್ದರೂ, ಹೆದರಿಕೆ ಅಥವಾ ತಪ್ಪು ಮಾಹಿತಿಯಿಂದಾಗಿ ಹಲವು ರೋಗಿಗಳು ಇನ್ನೂ ಶಸ್ತ್ರ ಚಿಕಿತ್ಸೆಯನ್ನು ವಿಳಂಬ ಮಾಡುತ್ತಿದ್ದಾರೆ.

ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್ ಬೆಂಗಳೂರಿನ ಕ್ಲಿನಿಕಲ್ ಸರ್ವೀಸಸ್ ಪ್ರಾದೇಶಿಕ ಮುಖ್ಯಸ್ಥರಾದ ಡಾ. ಅರ್ಚನಾ ಎಸ್ ಹೇಳುವಂತೆ: "ರೋಬೋಟಿಕ್ ಕ್ಯಾಟರ್ಯಾಕ್ಟ್ ಶಸ್ತ್ರಚಿಕಿತ್ಸೆಯಿಂದ ನಮ್ಮ ರೋಗಿಗಳ ಚಿಕಿತ್ಸೆಯಲ್ಲಿ ನಿಖರತೆ, ಸುರಕ್ಷತೆ ಮತ್ತು ಫಲಿತಾಂಶಗಳ ನಿಟ್ಟಿನಲ್ಲಿ ಮಹತ್ವದ ಮುನ್ನಡೆಯಾಗಿದೆ. ಹೋಲಿಕೆ ಇಲ್ಲದ ನಿಖರತೆಯಿಂದ ಚಿಕಿತ್ಸೆಯನ್ನು ವೈಯಕ್ತಿಕಗೊಳಿಸುವುದು. ಸುಧಾರಿತ, ಆಕ್ಸೆಸಿಬಲ್ ಕಣ್ಣಿನ ಆರೈಕೆಯನ್ನು ಒದಗಿಸಲು ನಮ್ಮ ಬದ್ಧತೆಯನ್ನು ನಾವು ಖಚಿತಪಡಿಸಿಕೊಳ್ಳಲು ಈ ತಂತ್ರಜ್ಞಾನವು ನಮಗೆ ಅನುಕೂಲ ಮಾಡಿಕೊಡುತ್ತದೆ."


ಕ್ಯಾಟರ್ಯಾಕ್ಟ್ ಸಾಮಾನ್ಯವಾಗಿ ಸದ್ದಿಲ್ಲದೇ ಶುರುವಾಗುತ್ತದೆ. ಆರಂಭಿಕ ಹಂತಗಳಲ್ಲಿ, ಕಾಂಟ್ರಾಸ್ಟ್ ಸಂವೇದನೆಯನ್ನು ಗಮನಿಸಬಹುದು. ರಾತ್ರಿ ಕಾಣುವುದು ಕಷ್ಟಕರವಾಗಬಹುದು ಮತ್ತು ಬೆಳಕಿನ ಹೊಳಪಿನ ಹೆಚ್ಚಳವಾಗುತ್ತದೆ. ಇದು ಸಾಮಾನ್ಯವಾಗಿ ವಯಸ್ಸಿನಿಂದ ಆಗುವ ಸಮಸ್ಯೆ ಎಂದು ಹಲವರು ಇದನ್ನು ತಪ್ಪು ತಿಳಿಯುತ್ತಾರೆ. ಪರಿಸ್ಥಿತಿ ಇನ್ನಷ್ಟು ಮುಂದುವರಿದಂತೆ, ಚಿಕಿತ್ಸೆ ನೀಡದೇ ಇದ್ದರೆ, ಸಂಪೂರ್ಣ ದೃಷ್ಟಿ ನಷ್ಟವಾಗಬಹುದು. ಸಾಮಾನ್ಯ ಕಣ್ಣಿನ ತಪಾಸಣೆಗಳು ಸಮಸ್ಯೆಯನ್ನು ಪತ್ತೆ ಮಾಡಲು ಅತ್ಯಂತ ಮುಖ್ಯವಾಗಿದ್ದು, ಸಮಯಕ್ಕೆ ಸರಿಯಾಗಿ ಮಧ್ಯಪ್ರವೇಶ ಮಾಡಿದರೆ ದೃಷ್ಟಿಯನ್ನು ರಕ್ಷಿಸಬಹುದು."


ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್ ಬೆಂಗಳೂರಿನ ಕ್ಲಿನಿಕಲ್ ಸೇವೆಗಳ ವಿಭಾಗದ ಪ್ರಾದೇಶಿಕ ಮುಖ್ಯಸ್ಥರಾದ ಡಾ. ಶ್ರೀಪತಿ ಹೇಳುವಂತೆ "ಕ್ಯಾಟರಾಕ್ಟ್‌ಗಳಿಗೆ ಶಸ್ತ್ರಚಿಕಿತ್ಸೆಯೇ ಪರಿಣಾಮಕಾರಿ ಚಿಕಿತ್ಸೆಯಾಗಿದೆ. ಫಾಕೋಎಮಲ್ಸಿಫಿಕೇಶನ್ ಎಂದು ಕರೆಯಲಾಗುವ ಪ್ರಮಾಣಿತ ಕಾರ್ಯಕ್ರಮದಲ್ಲಿ ಕೌಡ್ ಆಗಿರುವ ಲೆನ್ಸ್ ಅನ್ನು ತೆಗೆದು, ಕೃತಕವಾದ ಲೆನ್ಸ್ ಅನ್ನು ಹಾಕುವುದಾಗಿದೆ. ಇತ್ತೀಚಿನ ವರ್ಷಗಳಲ್ಲಿ ರೋಬೋಟಿಕ್ ಅಥವಾ ಲೇಸರ್ ಆಧರಿತ ಕ್ಯಾಟರ್ಯಾಕ್ಟ್ ಸರ್ಜರಿ ಸಂಖ್ಯೆ ಹೆಚ್ಚಳವಾಗಿದ್ದು, ಬ್ಲಡ್ ರಹಿತ, ನೋವು ರಹಿತ ಕಾರ್ಯವಿಧಾನದಲ್ಲಿ ಕೆಲವೇ ಸೆಕೆಂಡುಗಳಲ್ಲಿ ಶಸ್ತ್ರಚಿಕಿತ್ಸೆ ನಡೆಯುತ್ತದೆ. ಈ ಅನ್ವೇಷಣೆಗಳಿಂದ ಫಲಿತಾಂಶಗಳು ಸುಧಾರಿಸುತ್ತವೆ. ಆದರೆ, ಮೊದಲೇ ಪತ್ತೆ ಮಾಡುವುದು ಮತ್ತು ಸಮಯಕ್ಕೆ ಸರಿಯಾಗಿ ಶಸ್ತ್ರ ಚಿಕಿತ್ಸೆಯನ್ನು ಮಾಡುವುದು ಅತ್ಯಂತ ಅಗತ್ಯದ್ದಾಗಿದೆ."

40 ಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲರೂ ಕೂಡಾ ಪದೇ ಪದೇ ಕಣ್ಣಿನ ತಪಾಸಣೆಗಳನ್ನು ಮಾಡಿಸಿಕೊಳ್ಳುತ್ತಿರಬೇಕು. ರೀಡಿಂಗ್ ಗ್ಲಾಸ್‌ಗಳಿಗಷ್ಟೇ ಳಿಗಷ್ಟೇ ಅಲ್ಲ, ಗ್ಲಾಕೋಮಾ, ರೆಟಿನಾ ಸಮಸ್ಯೆಗ ಸಮಸ್ಯೆಗಳು ಮತ್ತು ಕ್ಯಾಟರ್ಯಾಕ್ಟ್ ಪತ್ತೆ ಮಾಡಿಸಿಕೊಳ್ಳಲೂ ಸಹಿತ ತಪಾಸಣೆಗಳನ್ನು ಮಾಡಿಸಿಕೊಳ್ಳಬೇಕು. 40 ವರ್ಷಗಳಾದ ನಂತರ ದೂರದ ವಸ್ತುಗಳು ಕಾಣಿಸುವ ರೀತಿಯಲ್ಲಿ ಹಠಾತ್ತನೆ ಬದಲಾವಣೆ ಕಂಡುಬಂದರೆ, ಇದು ಕ್ಯಾಟಯಾಕ್ಷನ ಪ್ರಾರಂಭದ ಸೂಚನೆಯಾಗಿರಬಹುದು. ಕೆಲವು ಬಾರಿ, ವ್ಯಕ್ತಿಯ ಅರಿವಿಗೆ ಬರದೇ ಒಂದು ಕಣ್ಣಿಗೆ ಮಾತ್ರ ಇದು ಬಾಧಿಸಲೂಬಹುದು. ಭಾರತದಲ್ಲಿ ಕ್ಯಾಟರ್ಯಾಕ್ಸ್ ಪ್ರತಿ ವರ್ಷ 3.8 ಮಿಲಿಯನ್ ಜನರಿಗೆ ಬಾಧಿಸುತ್ತದೆ. 60 ವರ್ಷವಾದವರಲ್ಲಿ ಈ ಪ್ರಕರಣದ ಸಂಖ್ಯೆ ಗಮನಾರ್ಹವಾಗಿ ಏರಿಕೆಯಾಗುತ್ತಿದೆ' ಎಂದು ಅವರು ಹೇಳಿದರು. 

Comments

Popular posts from this blog