ಆಡಳಿತಾಧಿಕಾರಿ, ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘ (ರಿ) ಬೆಂಗಳೂರು

ಆಡಳಿತಾಧಿಕಾರಿ, ಕರ್ನಾಟಕ ರಾಜ್ಯ ಗಂಗಮತಸ್ಥರ ಸಂಘ (ರಿ) ಬೆಂಗಳೂರು  



ಸಂಘದಲ್ಲಿ ಈ ಪೂರ್ವ ಅಸ್ತಿತ್ವದಲ್ಲಿದ್ದ ಕಾರ್ಯಕಾರಿ ಸಮಿತಿ/ಆಡಳಿತ ಮತ್ತು ಮಂಡಳಿ ಸದಸ್ಯರು ನಡೆಸಿರುವ ಅವ್ಯವಹಾರ ಮತ್ತು ಹಣದುರುಪಯೋಗಕ್ಕೆ ಸಂಬಂಧಿಸಿದಂತೆ ರಿಸಿದಂತೆ ಸಹಕಾರ ಸಂಘಗಳ ಉಪ ನಿಬಂಧಕರು, ಬೆಂಗಳೂರು 2ನೇ ವಲಯ ರವರ ಆದೇಶದಂತೆ, ವಿಚಾರಣಾಧಿಕಾರಿಗಳು ಕಲಂ 25ರ ವಿಚಾರಣೆ ನಡೆಸಿ, ಸಂಬಂಧಿಸಿದವರು ನೀಡಿರುವ ಹೇಳಿಕೆ ಮತ್ತು ದಾಖಲಾತಿಗಳನ್ನು ಪರಿಶೀಲಿಸಿ, ದಿನಾಂಕ: 30-12-2024 ರಂದು ವರದಿ ಸಲ್ಲಿಸಿರುತ್ತಾರೆ. ಸದರಿ ವರದಿಯಲ್ಲಿ ವಿಚಾರಣಾಧಿಕಾರಿಗಳು ಒಟ್ಟು ಮೊತ್ತ ಮೊತ್ತ ಕ್ರಮವಾಗಿ ರೂ.1,61,61,837, (ಮಾಜಿ ಅಧ್ಯಕ್ಷರು ಮತ್ತು ಮಾಜಿ ಪ್ರಧಾನ ಕಾರ್ಯದರ್ಶಿ ಜಂಟಿಯಾಗಿ) ರೂ.30,42,450/- (ಈ ಪೂರ್ವ ಅಸ್ತಿತ್ವದಲ್ಲಿದ್ದ ಪದಾಧಿಕಾರಿಗಳು/ಕಾರ್ಯಕಾರಿ ಸಮಿತಿ ಸದಸ್ಯರುಗಳಿಂದ ) ಮತ್ತು ರೂ.52,50,000/-ಗಳನ್ನು (ಮಾಜಿ ಅಧ್ಯಕ್ಷರಿಂದ) ಸಂಘದ ಹಣ ದುರುಪಯೋಗವಾಗಿರುವ ದುರುಪಯೋಗವಾಗಿರುವ ಹಣವನ್ನು ಈ ಪೂರ್ವ ಅಸ್ತಿತ್ವದಲ್ಲಿದ್ದ ಪದಾಧಿಕಾರಿಗಳು/ಕಾರ್ಯಕಾರಿ ಸಮಿತಿ ಸದಸ್ಯರುಗಳಿಂದ ವಸೂಲಿ ಬಗ್ಗೆ ವಿವರಿಸಿ, ಸದರಿ ಮಾಡಿಕೊಳ್ಳಲು ಸೂಚಿಸಿರುತ್ತಾರೆ. ವರದಿಯನ್ನು ಕೂಲಂಕುಷವಾಗಿ ಪರಿಶೀಲಿಸಿ, ಸಹಕಾರ ಸಂಘಗಳ ಉಪ ನಿಬಂಧಕರು, ಬೆಂಗಳೂರು 2ನೇ |ವಲಯ ರವರ ಪತ್ರ ದಿನಾಂಕ: 23-01-2025 ರಲ್ಲಿನ ನಿರ್ದೇಶನದಂತೆ ಈ ಪೂರ್ವ ಅಸ್ತಿತ್ವದಲ್ಲಿದ್ದ ಪದಾಧಿಕಾರಿಗಳು/ಕಾರ್ಯಕಾರಿ ಸಮಿತಿ ಸದಸ್ಯರುಗಳಿಗೆ ದಿನಾಂಕ: 10-02-2025 ರಂದು ತಿಳಿವಳಿಕೆ ಪತ್ರ ನೀಡಿದೆ. ಸದರಿ ತಿಳಿವಳಿಕೆ ಪತ್ರಕ್ಕೆ ಸದರಿ ಸಂಘದ ಪದಾಧಿಕಾರಿಗಳು/ಕಾರ್ಯಕಾರಿ ಸಮಿತಿ ಸದಸ್ಯರುಗಳು ಸ್ಪಂದಿಸಿ, ದುರುಪಯೋಗದ ಹಣವನ್ನು (ಮೊತ್ತವನ್ನು) ಬಡ್ಡಿಯೊಂದಿಗೆ ಪಾವತಿಸಿರುವುದಿಲ್ಲ. ಹಣ ದುರುಪಯೋಗದಿಂದಾಗಿ, ಸಂಘದ ಆಸ್ತಿಯಲ್ಲಿ ಕೊರೆತೆ ಉಂಟಾಗಿರುತ್ತದೆ. ಆದ್ದರಿಂದ مه 5.1,61,61,837, 30,42,450/- ಮತ್ತು ರೂ.52,50,000/-ಗಳನ್ನು ಅಧಿಭಾರ ಪ್ರಕರಣ ದಾಖಲಾದಗಿನಿಂದ ಸದರಿ ಹಣ ವಸೂಲಾಗುವವವರೆಗೆ ಶೇ.18% ಬಡ್ಡಿ ಆಕರ್ಷಿಸಿ ವಸೂಲಿ ಮಾಡಿಕೊಳ್ಳಲು ನಿಯಮಾನುಸಾರ, ಮಾನ್ಯ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು ಹಾಗೂ ಸಹಕಾರ ಸಂಘಗಳ ಉಪ ನಿಬಂಧಕರು, ಬೆಂಗಳೂರು 2ನೇ ವಲಯ ಇವರ ನ್ಯಾಯಾಲಯದಲ್ಲಿ ಅಧಿಭಾರ ಪ್ರಕರಣ ದಾಖಲಿಸಲು ತೀರ್ಮಾನಿಸಿದೆ. ವಿಚಾರಣಾ ವರದಿಯನ್ನು ಆಧರಿಸಿ ಕ್ರಮ ಕೈಗೊಳ್ಳಲು ಅನುವಾಗುವಂತೆ ವಕೀಲರ ಸಲಹೆ ಮತ್ತು ಮೇಲೆ ವಿವರಿಸಿದಂತೆ ಸಂಘದ ಪರವಾಗಿ ಕಾನೂನಾತ್ಮಕವಾಗಿ ನಿಯಮಾನುಸಾರ ಪ್ರಕರಣ ದಾಖಲಿಸಲು ಹಾಗೂ ಅಧಿಭಾರ ಪ್ರಕರಣ ನಡೆಸಲು ವಕೀಲರನ್ನು ನೇಮಕ ಮಾಡಿಕೊಳ್ಳಲು ತೀರ್ಮಾನಿಸಿದೆ. ಇವುಗಳಿಗೆ ಸಂಬಂಧಿಸಿದಂತೆ ಲೀಗಲ್ ಫೀ ಮತ್ತು ವಕೀಲರ ಫೀಯನ್ನು ನೀಡಲು ವಕೀಲರು ಸಂಘಕ್ಕೆ ನೀಡುವ ಪತ್ರವನ್ನು ಅನುಸರಿಸಿ ಪಾವತಿಸಲು ಸಂಘದ ಆಡಳಿತಾಧಿಕಾರಿಗಳು ಮತ್ತು |ವ್ಯವಸ್ಥಾಪಕರಿಗೆ ಅಧಿಕಾರ ನೀಡಲಾಗಿದೆ.

Comments

Popular posts from this blog