ರಾಜರಾಜೇಶ್ವರಿ ದಂತವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಸ್ಪೋರ್ಟ್ಸ್ ಡೆಂಟಿಸ್ಟ್ರಿ ವಿಭಾಗದ ಮೊದಲ ನೋಡಲ್ ಸೆಂಟರ್
ರಾಜರಾಜೇಶ್ವರಿ ದಂತವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಸ್ಪೋರ್ಟ್ಸ್ ಡೆಂಟಿಸ್ಟ್ರಿ ವಿಭಾಗದ ಮೊದಲ ನೋಡಲ್ ಸೆಂಟರ್
ಮತ್ತು ಕ್ಲಿನಿಕ್ ದಿನಾಂಕ: 28/11/2024 ರಂದು ದಕ್ಷಿಣ ವಿಭಾಗದ ಕ್ರೀಡಾ ಪ್ರಾಧಿಕಾರದ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿಷ್ಣು ಸುಧಾಕರನ್ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಭಾರತೀಯ ದಂತಚಿಕಿತ್ಸಾ ಸಂಸ್ಥೆಯ ಉಪಾಧ್ಯಕ್ಷರಾದ ಡಾ. ರಂಗನಾಥ, ಭಾರತೀಯ ಓಲಂಪಿಕ್ ಅಥ್ಲೆಟಿ ಡಾ. ಪ್ರಿಯಾಂಕಾ ಗೋಸ್ವಾಮಿ, ಭಾರತೀಯ ದಂತ ಚಿಕಿತ್ಸಾ ಅಕಾಡೆಮಿಯ ಶೈಕ್ಷಣಿಕ ನಿರ್ದೇಶಕರಾದ ಡಾ. ರೀನಾ ಕುಮಾರ ಅವರುಗಳು ಭಾಗವಹಿಸಿದ್ದರು.
ರಾಜರಾಜೇಶ್ವರಿ ದಂತವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಸಹಭಾಗಿತ್ವದಲ್ಲಿ ಪ್ರಾರಂಭವಾದ ಈ ವಿಭಾಗವು ಕ್ರೀಡಾ ಪ್ರಾಧಿಕಾರಕ್ಕೆ ಸಂಬಂಧಿಸಿದ ಕ್ರೀಡಾಪಟುಗಳಿಗೆ ಮತ್ತು ಕರ್ನಾಟಕ ವಿಶ್ವವಿದ್ಯಾಲಯಗಳ ಕ್ರೀಡಾ ವಿದ್ಯಾರ್ಥಿಗಳಿಗೆ ಸಲಹೆ ಮತ್ತು ಚಿಕಿತ್ಸೆ ನೀಡುವ ಉಪಕರಣಗಳ ಸೌಲಭ್ಯವನ್ನು ಒಳಗೊಂಡಿದೆ. ಇದು ಭಾರತೀಯ ದಂತ ಚಿಕಿತ್ಸಾ ಸಂಸ್ಥೆಯ ಅಂಗವಾಗಿ ಮತ್ತು ಭಾರತೀಯ ಕ್ರೀಡಾ ದಂತ ಚಿಕಿತ್ಸಾ ಅಕಾಡೆಮಿಯ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಸೌಲಭ್ಯವನ್ನು, ಕ್ರೀಡಾಪಟುಗಳು ಅವರ ಗುರಿಗಳನ್ನು ಸಾಧಿಸಲು ದಂತ ಆರೋಗ್ಯದ ಮಹತ್ವವನ್ನು ಗುರುತಿಸಿ ಒಲಂಪಿಕ್ ಮತ್ತು ಕಾಮನ್‌ವೆಲ್ತ್ ಗೇಮ್ ನಂತಹ ಅಂತರರಾಷ್ಟ್ರೀಯ ಸಂಸ್ಥೆಗಳು ಕ್ರೀಡಾಪಟುಗಳಿಗೆ ನೀಡುತ್ತಿದೆ.
ಸ್ಪೋರ್ಟ್ಸ ಡೆಂಟಿಸ್ಟ್ರಿ ವಿಭಾಗದ ಮೊದಲ ನೋಡಲ್ ಸೆಂಟರ್ ಮತ್ತು ಕ್ಲಿನಿಕ್ ಆಯೋಜನೆಯು ದಕ್ಷಿಣ ಭಾರತದಲ್ಲಿ ಇದು ಮೊದಲನೆಯದಾಗಿದೆ. ಈ ಸೌಲಭ್ಯವನ್ನು ಕ್ರೀಡಾ ಪಟುಗಳಿ, ರಾಜರಾಜೇಶ್ವರೀ ಸಮೂಹ ಸಂಸ್ಥೆಗಳ ಸಂಸ್ಥಾಪಕ ಕುಲಪತಿಗಳಾದ ಡಾ.ಎ.ಸಿಷಣ್ಮುಗಂ ಅವರು ಕೊಡುಗೆಯಾಗಿ ನೀಡಿದಂತಾಗಿದೆ. ಎಲ್ಲಾ ಸೌಲಭ್ಯಗಳ ಪ್ರಯೋಜನವನ್ನು ಕ್ರೀಡಾಪಟುಗಳು ಪಡೆಯಬಹುದಾಗಿದೆ.
ಕಾರ್ಯಕ್ರಮದಲ್ಲಿ ರಾಜರಾಜೇಶ್ವರೀ ಸಮೂಹ ಸಂಸ್ಥೆಗಳ ಸಂಸ್ಥಾಪಕ ಕುಲಪತಿಗಳಾದ ಸನ್ಮಾನ್ಯ ಡಾ|| ಎ.ಸಿ ಷಣ್ಮುಗಂ ರವರು ಹಾಗೂ ಸಕಾರ್ಯಕಾರಿಣಿ ನಿರ್ದೇಶಕರಾದ ಡಾ|| ವಿಜಯಾನಂದ್, ದಂತವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ಎಡ್ರಿನ್ ದೇವದಾಸ್,


Comments
Post a Comment