ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಕೇಷನ್

 ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಕೇಷನ್ ಪತ್ರಿಕಾಗೋಷ್ಠಿ


ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಕೇಷನ್, ಶೈಕ್ಷಣಿಕ ವಿಷಯಾಸಕ್ತರನ್ನೊಳಗೊಂಡ ವೇದಿಕೆ. ಶಿಕ್ಷಣಕ್ಷೇತ್ರದ ವಿವಿಧ ಸ್ತರಗಳಲ್ಲಿ ಅಂದರೆ ಪೂರ್ವ ಪ್ರಾಥಮಿಕ ಹಂತದಿಂದ ಆರಂಭಗೊಂಡು ಉನ್ನತ ಹಾಗೂ

ಸಂಶೋಧನೆಯಲ್ಲಿ ತೊಡಗಿಕೊಂಡು ಕೆಲಸಮಾಡುತ್ತಿರುವ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು, ಶಿಕ್ಷಣ

ತಜ್ಞರು, ಚಿಂತಕರು, ಮಾಜಿ ಕುಲಪತಿಗಳು, ಶಿಕ್ಷಣ ಕ್ಷೇತ್ರದಿಂದ ಆರಿಸಿಬಂದ ಜನಪ್ರತಿನಿಧಿಗಳು ಅಲ್ಲದೇ ಶಿಕ್ಷಣ

ಕ್ಷೇತ್ರ ಕುರಿತು ಅಸಕ್ತಿ ಮತ್ತು ಕಳಕಳಿ ಹೊತ್ತವರೆಲ್ಲರೂ ಸಕ್ರೀಯರಾಗಿ ಈ ವೇದಿಕೆಯಲ್ಲಿ

ಕಾರ್ಯನಿರ್ವಹಿಸುತ್ತಿದ್ದಾರೆ. ಉತ್ತಮ ಶಿಕ್ಷಣದ ಜೊತೆಗೆ ನಮ್ಮ ಮಕ್ಕಳು ಉತ್ತಮ ಮನಸತ್ಯವುಳ್ಳವರಾಗಿ

ಸಶಕ್ತರಾಗಿ, ಮಾನಸಿಕ ಧೃಡತೆಯೊಂದಿಗೆ ದೇಶವನ್ನು ಪ್ರಗತಿಯತ್ತ ಮುನ್ನಡೆಸುವ ಪ್ರಜೆಗಳಾಗಿ

ರೂಪುಗೊಳ್ಳಬೇಕೆಂಬ ಹಂಬಲದೊಂದಿಗೆ ತಮ್ಮನ್ನು ತೊಡಗಿಸಿಕೊಂಡಿರುವ ಈ ವೇದಿಕೆಯ ಸದಸ್ಯರ ತಂಡ


ಶಿಕ್ಷಣ ಕ್ಷೇತ್ರದ ಒಳಿತಿಗಾಗಿ ಚಟುವಟಿಕೆಗಳನ್ನು ನಿರ್ವಹಿಸುತ್ತಿದೆ. ಅದರಲ್ಲೂ ರಾಜ್ಯ ಸರ್ಕಾರ ರಾಜಕೀಯ


ಕಾರಣಗಳನ್ನು ಹಿನ್ನೆಲೆಯಲ್ಲಿಟ್ಟುಕೊಂಡು ರಾಷ್ಟ್ರೀಯ ಶಿಕ್ಷಣ ನೀತಿ-2020ನ್ನು 'ಕಿತ್ತೊಗೆದು' ರಾಜ್ಯದಲ್ಲಿ


ರಾಜ್ಯ ಶಿಕ್ಷಣ ನೀತಿಯನ್ನು ಅಳವಡಿಸಲು ಮುಂದಾಗಿರುವುದರ ವಿರುದ್ಧ ವೇದಿಕೆ ಹಮ್ಮಿಕೊಂಡ


ಕಾರ್ಯಕ್ರಮಗಳು ಜನಮನ್ನಣೆಯಪಡೆದಿವೆ.


ವೇದಿಕೆ ನಡೆಸಿದ ಹೋರಾಟದ ಮೊದಲ ಸುತ್ತಿನಲ್ಲಿ ರಾಜ್ಯದಾದ್ಯಂತ ಶಿಕ್ಷಣ ತಜ್ಞರು ಎನ್ ಇ ಪಿ ಕುರಿತು ಜನಜಾಗೃತಿಯ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದರು. ಈ ಕಾರ್ಯಕ್ರಮವು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ನಡೆದು ಜನಜಾಗೃತಿಯನ್ನುಂಟುಮಾಡಿತು.ಜಾಗೃತಿಯ ಮುಂದುವರೆದ ಭಾಗವಾಗಿ ಸಮಾಜದ ಎಲ್ಲ ಸ್ತರದ ಜನರಿಂದ ಎನ್ ಇ ಪಿ 2020ರಪರವಾಗಿ ಸಹಿಸಂಗ್ರಹ ಕಾರ್ಯಕ್ರಮ ನಡೆದು ಈ ಕಾರ್ಯಕ್ರಮವೂ ಯಶಸ್ವಿಯಾಗಿ ನಡೆಯಿತೆಂದು ಹೇಳಲು ಸಂತೋಷವೆನಿಸುತ್ತದೆ. ವೇದಿಕೆ ನಡೆಸಿದ ಈ ಕಾರ್ಯಕ್ರಮಗಳಲ್ಲಿ ಶಿಕ್ಷಕರು, ಎಲ್ಲ ಸ್ತರದ ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಅಭ್ಯಾಸಿಸುತ್ತಿರುವ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದರು. ಆನ್ ಲೈನ್ ನಲ್ಲಿ ಕೊಡ ಸಾರ್ವಜನಿಕರು ಸಹಿ ಮಾಡುತ್ತಿದ್ದಾರಷ್ಟೇ ಅಲ್ಲದೆ ಎನ್ ಇ ಪಿಯನ್ನು ರದ್ದುಗೊಳಿಸುವ ಸರ್ಕಾರದ ನಿರ್ಧಾರದ ವಿರುದ್ಧ ತಮ್ಮ ಧ್ವನಿಯೆತ್ತಿದ್ದಾರೆ ಎನ್ನುವುದನ್ನು ನಾವಿಲ್ಲಿ ವಿಶೇಷವಾಗಿ ಉಲ್ಲೇಖಿಸಲು ಇಚ್ಛಿಸುತ್ತೇವೆ. ಎನ್ ಇ ಪಿ-2020 ರ ವಿರುದ್ಧದ ನಿರ್ಣಯ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವುದನ್ನು ಅರಿತ ಖಾಸಗಿ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳು ಮುಂದೆ ಬಂದು ಸಹಿಮಾಡಿದ್ದಷ್ಟೇ ಅಲ್ಲ ಸಹಿಯನ್ನು ಸಂಗ್ರಹಿಹೊಸುವಲ್ಲಿ ವೇದಿಕೆಯ ಜೊತೆ ಕೈಜೋಡಿಸಿದ್ದು ವಿಶೇಷವೆನ್ನಿಸಿತು.

ವೇಗ ಪಗರಂ ಖಾರ ಶನಾಲಟಿಕೆ ಎಡಕೋರಿನ, ಯಧವೆತ್ತಾಗಿ ಎನೋ ಈ ಸಿಟಿ-2020ರಲ್ಲಿ ರಾಜ್ಯದಲ್ಲಿ ನಡೆದ ಕಳೆದ ಚುನಾವಣೆಯ ನಂತರ ಆಡಳಿತಕ್ಕೆ ಬಂದಿರುವ ಈ ಸರ್ಕಾರವು ರಾಜ್ಯ ಸರ್ಕಾರದ ಧರಣಿಯನ್ನು     ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ಮಾಸಾಶನ-2020 ರಂದು 2020ರ ದಶಕದಲ್ಲಿ ರಾಯಭಾರಿ ಸಮಿತಿಯ ಅಧ್ಯಕ್ಷೀಯ ಸಮಿತಿಯ ಅಧ್ಯಕ್ಷೀಯ ಸಮಿತಿಯ ಅಧ್ಯಕ್ಷೀಯ ಸಮಿತಿಯ ಅಧ್ಯಕ್ಷೀಯ ಸಮಿತಿಯ ಅಧ್ಯಕ್ಷೀಯ ಸಮಿತಿಯ ಅಧ್ಯಕ್ಷರಾದ ಡಾ. ತನ್ನನ್ನು ತೊಡಗಿಸಿಕೊಂಡಿರುವುದು ರಾಜ್ಯದ ಎಲ್ಲ ಸಾಮಾನ್ಯ ಜನರಿಗೆ ತಿಳಿದ ವಿಷಯ. ಆದರೆ ಕನ್ನಡ ಮತ್ತು ಕನ್ನಡ ಸಂಸ್ಕೃತಿಯ ಪರಿಚಯದ ಮಕ್ಕಳಿಗೆ ಎನ್ ಐ ಪಿ-2020 ಅಳವಡಿಕೆಯಿಂದ ಸಾಧ್ಯವಿಲ್ಲ ಎಂದು ವೀಡಿದ ಸರ್ಕಾರ ರಾಜ್ಯ ಶಿಕ್ಷಣ ನೀತಿ ಸಿದ್ದಪಡಿಸಲು ಕನ್ನಡದವರಲ್ಲದವರಿಗೆ ನೇತೃತ್ವ ನೀಡಲಾಗಿದೆ  ಅಲ್ಲದೆ ಕನ್ನಡದಲ್ಲದವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಮಿತಿ ಒಳಗೊಂಡಿರುವುದು ತನ್ನ ಹೇಳಿಕೆಗೆ ತಾನೇ ವಿರೋಧಾತ್ಮಕವಾಗಿ ಸರ್ಕಾರ ನಡೆಯುತ್ತಿರುವುದು ನಿಜಕ್ಕೂ ಖಂಡನೀಯ, ಜೊತೆಗೆ ಅಂತರಾಷ್ಟ್ರೀಯ ಮಟ್ಟದ ಖ್ಯಾತಿಯನ್ನು ಹೊಂದಿದ ಅನೇಕ ಕನ್ನಡದ ಶಿಕ್ಷಣ ತಜ್ಞರಿರುವಾಗ ಹೊರಗಿನವರನ್ನು ಸರ್ಕಾರ ಗುರುತಿಸಿ ಕರೆತಂದಿರುವುದು ಈ ನೆಲದ ಮಣ್ಣಿನ ಶಿಕ್ಷಣ ತಜ್ಞರು ರಾಷ್ಟ್ರಕ್ಕೆ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಈ ಸರ್ಕಾರ ಪರಿಗಣಿಸಿಲ್ಲ ನಮ್ಮ ರಾಜ್ಯದ ಪ್ರತಿಭಾವಂತರಿಗೆ ಈ ಮೂಲಕ ಪರೋಕ್ಷವಾಗಿ ಅಪಮಾನಿಸಿದೆ ಎಂಬ ನೋವನ್ನೂ ನಾವೀ ಸಂದರ್ಭದಲ್ಲಿ ನಿಮ್ಮೊಂದಿಗೆ ಮತ್ತು ನಿಮ್ಮ ಮೂಲಕ ರಾಜ್ಯದ ಜನತೆಯೊಂದಿಗೆ ಹಂಚಿಕೊಳ್ಳಲು ಇಚ್ಛಿಸುತ್ತೇವೆ.


ಎನ್ ಇ ಪಿ-2020ರ ರಚನೆಯ ಸಮಯದಲ್ಲಿ ಪ್ರತಿ ರಾಜ್ಯದಿಂದ ಒಟ್ಟು 25 ಪೊಸಿಷನ್ ಪೇಪರ್ ಗಳನ್ನು ಪ್ರತಿ ರಾಜ್ಯದಲ್ಲೂ ಶಿಕ್ಷಣ ತಜ್ಞರ ನೆರವಿನಿಂದ ಸಿದ್ಧಪಡಿಸಲಾಗಿತ್ತು. ಕರ್ನಾಟಕದಲ್ಲಿ ರಾಜ್ಯ ಶಿಕ್ಷಕರ ಸಂಘದಿಂದ ವಿಶೇಷವಾಗಿ ಒಟ್ಟು 27 ಪೊಸಿಷನ್ ಪೇಪರ್ ಗಳನ್ನು ಸಿದ್ಧಪಡಿಸುವಲ್ಲಿ ರಾಜ್ಯದ ಎಲ್ಲ ವಿಭಾಗಗಳಿಂದ ಬಂದ ಶಿಕ್ಷಣ ತಜ್ಞರು ಸಕ್ರೀಯರಾಗಿ ಭಾಗವಹಿಸಿದ್ದರು. ಈಗ ಸರ್ಕಾರ ರಚಿಸಿರುವ ರಾಜ್ಯ ಶಿಕ್ಷಣ ಸಮಿತಿ, ಅದಾಗಲೇ ಉನ್ನತ ಶಿಕ್ಷಣ ತಜ್ಞರ ಸಲಹೆಗಳನ್ನು ಉನ್ನತ ಶಿಕ್ಷಣದ ಸ್ಥಿತಿ-ಗತಿ ಕುರಿತ ಅಧ್ಯಯನಕ್ಕೆ ಮುನ್ನವೇ ಆಯ್ಕೆ ಶಿಕ್ಷಣ ತಜ್ಞರೊಂದಿಗೆ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸುತ್ತಿರುವುದು ಎಷ್ಟು ಸರಿ. ಶಿಕ್ಷಣ ಕ್ಷೇತ್ರದ ಪ್ರತಿ ಹಂತದಲ್ಲೂ ಸಕ್ರೀಯವಾಗಿರುವ ಶಿಕ್ಷಣ ತಜ್ಞರ ಸಮಿತಿ, ಶಿಕ್ಷಕರ ಸಂಘಗಳು, ಶಾಲಾ-ಕಾಲೇಜುಗಳ ಆಡಳಿತ ಮಂಡಳಿಯ ಸದಸ್ಯರು, ಕಾಲೇಜು ಬೆಟರ್ಮೆಂಟ್ ಸಮಿತಿಯ ಸದಸ್ಯರೂ ಸೇರಿದಂತೆ ಇನ್ನಿತರ ಶಿಕ್ಷಣ ಕ್ಷೇತ್ರದ ಸದಸ್ಯರನ್ನು ಸಾರ್ವಜನಿಕರ, ಉದ್ಯೋಗಕ್ಷೇತ್ರದ ಪ್ರತಿನಿಧಿಗಳ ಸಲಹೆಯನ್ನೂ ಎಸ್ ಇ ಪಿ ನಿಯೋಜಕರು ಸಭೆಗಳಲ್ಲಿ ಸ್ವೀಕರಿಸಿದ ಬಗ್ಗೆ, ಮಾಹಿತಿ ಲಭ್ಯವಿಲ್ಲ.


ವಿಶೇಷವಾಗಿ ಚರ್ಚಿಸಲ್ಪಡುತ್ತಿರುವ ವಿಷಯಗಳಲ್ಲಿ ಎನ್ ಇ ಪಿ-2020ರ ಸಲಹೆಗನುಗುಣವಾಗಿ ಉನ್ನತ ಶಿಕ್ಷಣದಲ್ಲಿ ಅಳವಡಿಸಲಾಗಿರುವ ಆನರ್ಸ ಪದವಿ, ಬಹುಶಿಸ್ತೀಯ ಕಲಿಕೆ ಹಾಗೂ ಮಲ್ಟಿಪಲ್ ಎಕ್ಸಿಟ್ ಮಲ್ಟಿಪಲ್ ಎಂಟ್ರಿ ಅವಕಾಶಗಳ ಕುರಿತೇ ಚರ್ಚಿಸಲಾಗುತ್ತಿದೆ. ನಾವು ಗಮನಿಸಲೇ ಬೇಕಾದ ಅಂಶವೆಂದರೆ


-ನಾಲ್ಕು ವರ್ಷಗಳ ಪದವಿ ಕಾರ್ಯಕ್ರಮ ವಿದ್ಯಾರ್ಥಿಯ ಇಚ್ಛೆಗೆ ಬಿಟ್ಟಿದ್ದು ಸಂಶೋಧನೆಯಲ್ಲಿ ತೊಡಗ ಬಯಸುವ ಅಥವಾ ನೌಕರಿಗಾಗಿ ತನ್ನನ್ನು ತೀವುಗತಿಯಲ್ಲಿ ಸಿದ್ದಪಡಿಸಿಕೊಳ್ಳುವ, ಉನ್ನತ ವ್ಯಾಸಂಗಕ್ಕಾಗಿ ವಿದೇಶದ ಅಥವಾ ಭಾರತೀಯ ವಿಶ್ವವಿದ್ಯಾಲಯದಲ್ಲಿ ದಾಖಲಾಗಬಯಸುವ ವಿದ್ಯಾರ್ಥಿಗಳು ಈ ಆನರ್ಸ್ ಪದವಿಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ ಎಂಬ ಸ್ಪಷ್ಟತೆ ಎನ್ ಇ ಪಿ -2020 ನೀಡಿದೆ. ಉಳಿದಂತೆ ವಿದ್ಯಾರ್ಥಿಗಳು ಸಾಮಾನ್ಯ ಮೂರು ವರ್ಷಗಳ ಪದವಿಯನ್ನೇ ಆರಿಸಿಕೊಳ್ಳಬಹುದೆಂದು ನೀತಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.


-ಇನ್ನು ಓಪನ್ ಎಲೆಕ್ಟಿವ್ ಮತ್ತು SEC ಆಯ್ಕೆಯು ಈಗಾಗಲೇ ಚಾಲ್ತಿಯಲ್ಲಿರುವ CBCS ನ ಭಾಗವಾಗಿದ್ದು ಈ ವ್ಯವಸ್ಥೆ ಒಂದು ದಶಕದ ಹಿಂದಿನಿಂದಲೇ ಚಾಲ್ತಿಯಲ್ಲಿದೆ. ಸ್ನಾತಕೊತ್ತರ ವಿಭಾಗದಲ್ಲಿ ಅಳವಡಿಕೆಯಾದ ಈ ಪದ್ಧತಿಯನ್ನು ಬದಲಾಗುತ್ತಿರುವ ಔದ್ಯೋಗಿಕ ಕ್ಷೇತ್ರಗಳಿಗೆ ಅನುಕೂಲವಾಗಿ ಪದವಿಯ ನಂತರದಲ್ಲಿಯೇ ಅನುಕೂಲವಾಗುವಂತೆ ಎನ್ ಇ ಪಿ 2020 ಸಲಹೆ ಮಾಡಿದೆ. ಸಿ ಬಿ ಸಿ ಎಸ್ ಪದ್ಮತೆಯನ್ನು ಕರ್ನಾಟಕ 2018 ರಿಂದಲೇ ಆಚರಣೆಗೆ ತಂದಾಗಿದೆ.

-ಬಹುಶಿಸ್ತಿಯ ಕಲಿಕೆ ಭಾರತದ ಶಿಕ್ಷಣ ಪರಂಪರೆಯಲ್ಲಿ ಬಹಳ ಹಿಂದಿನಿಂದಲೇ ಚಾಲ್ತಿಯಲ್ಲಿದೆ. ನಳಂದ, ತಕ್ಷಶಿಲಾ, ವಿಕ್ರಮಶೀಲ ವಿಶ್ವವಿದ್ಯಾಲಯಗಳು ವಿಶ್ವದ ಎಲ್ಲ ಭಾಗಗಳಿಂದ ವಿದ್ಯಾರ್ಥಿಗಳನ್ನು ಈ ಕಾರಣಕ್ಕಾಗಿಯೇ ಆಕರ್ಷಿಸುತ್ತಿದ್ದವು ಎನ್ನುವುದು ತಿಳಿದ ವಿಷಯವೇ. ಹಾಗಿದ್ದೂ ಬಹುಶಿಸ್ತಿಯ ಕಲಿಕೆಯ ಅವಕಾಶವನ್ನು ಯುಜಿಸಿ 2015 ರಿಂದಲೇ ವಿದ್ಯಾರ್ಥಿಗಳಿಗೆ ಅಧಿಕೃತವಾಗಿ ಅವಕಾಶ ಕಲ್ಪಿಸಿದೆ.


- ಅಧ್ಯಯನಗಳ ಮೂಲಕ ಶಿಕ್ಷಣದಿಂದ ಕೌಟುಂಬಿಕ ಹಾಗೂ ಇನ್ನಿತರ ಕಾರಣಗಳನ್ನು ಮುಂದಿಟ್ಟು ಶಿಕ್ಷಣದಿಂದ ಹೊರ ಬರುವವರ ಸಂಖ್ಯೆ ರಾಜ್ಯದಲ್ಲಿದೆ. ಅದರಲ್ಲೂ ಶಿಕ್ಷಣದಿಂದಹೊರಬರುತ್ತಿರುವವರಲ್ಲಿ ಹೆಚ್ಚಿನವರು ಗ್ರಾಮೀಣ ವಿಭಾಗದ ಮತ್ತು ಹೆಣ್ಣು ಮಕ್ಕಳು ಎಂದು ವಿಶೇಷವಾಗಿ ಹೇಳಬೇಕಿಲ್ಲ. ರಾಜ್ಯ ಶಿಕ್ಷಣ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರೊಫೆಸರ್ ಥೋರಟ್ ರು 2005 ರಲ್ಲಿ ಯು ಜಿ ಸಿ ಅಧ್ಯಕ್ಷರಾಗಿದ್ದಾಗ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿಶೇಷ ಕಾಳಜಿಯನ್ನು ವ್ಯಕ್ತ ಪಡಿಸಿದ್ದರು. ಮಲ್ಟಿಪಲ್ ಎಕ್ಸಿಟ್ ಮತ್ತು ಡಿಪ್ಲೋಮಾ ಪದವಿ ಸರ್ಟಿಫಿಕೇಟ್ ಗಳು ಇಂತಹ ಮಕ್ಕಳಿಗೆ ಹೆಚ್ಚು ಅನುಕೂಲವಾಗುತ್ತದೆ. ವಿದ್ಯಾರ್ಥಿಗಳು ತಾವು ಶಿಕ್ಷಣವನ್ನು ನಿಗದಿತ ಸಮಯದೊಳಗೆ ಹಿಂದುರುಗಿ ಬಂದು ಮುಂದುವರೆಸುವ ಅವಕಾಶವನ್ನು ಸಲಹೆಯಡಿ ಅವಕಾಶ ಕಲ್ಪಿಸಲಾಗಿದೆ. ಶೈಕ್ಷಣಿಕ ಸಂಸ್ಥೆಯೊಂದರಿಂದ ದೊರೆತ ಪ್ರಶಸ್ತಿ ಪತ್ರ ವ್ಯಕ್ತಿಯ ಜೀವನ ಕಟ್ಟಬಹುದಾದರೆ ಅಂತಹ ಪದ್ಧತಿಗೆ ಕುರಿತು ಜಿಜ್ಞಾಸೆಯೇಕೆ?


ಎನ್ ಇ ಪಿ-2020 ಗ್ರಾಮೀಣ ಮಟ್ಟದಿಂದ ಹಿಡಿದು ಸಮಾಜದ ಎಲ್ಲ ಸ್ತರದ ಜನರೊಂದಿಗೆ ಚರ್ಚಿಸಿ, ಸಭೆ - ಗೋಷ್ಠಿ ನಡೆಸಿ, ಸೆಮಿನಾರ್ ಗಳನ್ನು ನಡೆಸಿ ಸಂಗ್ರಹಿಸಿದ ಅಭಿಪ್ರಾಯಗಳನ್ನು ಕ್ರೋಡೀಕರಿಸುವ ಮೂಲಕ ವರದಿಯನ್ನು ಸಿದ್ಧಪಡಿಸಿ ಜನಸಾಮಾನ್ಯರ ಮುಂದಿಟ್ಟಿತು. ಆನ್ ಲೈನ್ ಮೂಲಕವೂ ಜನರು ತಮ್ಮ ಅಭಿಪ್ರಾಯಗಳನ್ನು ದಾಖಲಿಸಬಹುದಿತ್ತು ಇಂತಹ ಪ್ರಯತ್ನ ರಾಜ್ಯ ಶಿಕ್ಷಣ ಸಮಿತಿಯಿಂದ ನಡೆದ ಬಗೆ. ಶಿಕ್ಷಣ ಕ್ಷೇತ್ರಕ್ಕೆ ಮಾಹಿತಿ ಪಬ್ಲಿಕ್ ಡೋಮೇನ್ ನಲ್ಲೂ ಲಭ್ಯವಿಲ್ಲ, ಸಾರ್ವಜನಿಕರು ಎಸ್ ಇ ಪಿ ಕುರಿತ ಚರ್ಚೆಗಳಲ್ಲಿ ಹೇಗೆ ಭಾಗವಹಿಸಬಹುದೆಂಬ ಕುರಿತು ಯಾವ ಮಾಹಿತಿಯೂ ಲಭ್ಯವಿಲ್ಲ.


'ಉನ್ನತ ಶಿಕ್ಷಣದ ದೃಷ್ಟಿಯಿಂದ ಆಲೋಚಿಸಿದಾಗ ಉನ್ನತ ಶಿಕ್ಷಣ ಕುರಿತ ನಿರ್ಣಯಗಳನ್ನು ಉನ್ನತ ಸಂಸ್ಥೆಗಳಾದ ಯುಜಿಸಿ ಹಾಗೂ ಎಆಯ್ ಸಿಟಿಇ ಗಳು ತೆಗೆದುಕೊಳ್ಳುತ್ತವೆಯಾದ್ದರಿಂದ, ಎಸ್ ಇ ಪಿಯ ಸಮಿತಿ ಈ ಸಮಿತಿಗಳೊಂದಿಗೆ ಚರ್ಚಿಸಿರುವ ಬಗ್ಗೆಯೂ ಮಾಹಿತಿಯ ಕೊರತೆಯಿದೆ.


ಎನ್ ಇ ಪಿ-2020ರ ಅಳವಡಿಕೆಗೆ ರಾಜ್ಯದ ಶಾಲಾ ಕಾಲೇಜುಗಳಲ್ಲಿ ಮಾಡದಿರಲು ರಾಜ್ಯ ಸರ್ಕಾರ ಮೂಲ ಭೂತ ಸೌಕರ್ಯದ ಕೊರತೆಯ ಕುರಿತು ಪುಸ್ತಾಪ ಮಾಡಿತ್ತು. ರಾಜ್ಯದ ಶಾಲಾ ಕಾಲೇಜುಗಳಲ್ಲಿರುವ ಮಾನವ ಸಂಪನ್ಮೂಲ ಹಾಗೂ ಇತರ ಕೊರತೆಗಳ ಕುರಿತು ಮಾಹಿತಿಯನ್ನು ಸಂಗ್ರಹಿಸಿರುವ ಕುರಿತಾಗಲೀ ಕೊರತೆಯ ನಿವಾರಣೆ ಬಗ್ಗೆ, ರಾಜ್ಯ ಸರ್ಕಾರ ತೆಗೆದುಕೊಂಡ ನಿರ್ಧಾರಗಳ ಬಗ್ಗೆಯಾಗಲೀ ಕ್ರಮ ತೆಗೆದುಕೊಳ್ಳದೇ ಇಂದಿನ ಈ ರಾಜ್ಯ ಸರ್ಕಾರ ಕೇವಲ ರಾಜಕೀಯ ಧೋರಣೆಯನ್ನು ಮುಂದಿಟ್ಟುಕೊಂಡು ಎನ್ ಇ ಪಿ-2020 ವಿರುದ್ಧವಾಗಿ ನಿರ್ಣಯ ತೆಗೆದುಕೊಂಡಿರುವುದು ರಾಜ್ಯದ ಆಡಳಿತ ಸ್ವಾಮ್ಯದಲ್ಲಿ ಬರುವ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳಿಗೆ ಮಾಡುವ ಅನ್ಯಾಯ. ಸರ್ಕಾರ ಶಿಕ್ಷಣದಲ್ಲಿ ನಡೆಸುತ್ತಿರುವ ಈ ಹಸ್ತಕ್ಷೇಪ ರಾಜ್ಯದ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಮುಂದಿನ ವರ್ಷಗಳಲ್ಲಿ ಕಡಿಮೆಯಾಗುವ ಸಾಧ್ಯತೆಗಳೇ ಹೆಚ್ಚು ಅಲ್ಲದೇ ಖಾಸಗಿ ಶಾಲೆಗಳು ಕ್ರಮೇಣ ರಾಜ್ಯದ ಬೋರ್ಡನಿಂದ ಹೊರಬಂದು ಕೇಂದ್ರದ ಬೋರ್ಡಗಳನ್ನು ತಮ್ಮ ಶಾಲೆಗಳಲ್ಲಿ ಅಳವಡಿಸಿಕೊಂಡರೆ ಕೇವಲ ಸರ್ಕಾರೀ ಶಾಲೆಗಳ ಮಕ್ಕಳು ಎಸ್ ಇ ಪಿ ನೀತಿಯನ್ವಯ ಶಿಕ್ಷಣ ಪಡೆಯುತ್ತಾರೆ. ಮತ್ತು ಆಗ ಉಳ್ಳವರಿಗೆ ಎನ್ ಇ ಪಿ ಶಿಕ್ಷಣವಾದರೆ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಎಸ್ ಇ ಪಿ ಎನ್ನುವ ಎರಡು ವರ್ಗದ ಸೃಷ್ಟಿಗೆ ರಾಜ್ಯ ಸರ್ಕಾರದ ಈ ನಿರ್ಧಾರ ಕಾರಣವಾಗುತ್ತಿದೆ ಎಂಬ ಅಂಶವನ್ನೂ ಸರ್ಕಾರ ಗಣನೆಗೆ ತೆಗೆದುಕೊಂಡ0ತಿಲ್ಲ.


ಒಟ್ಟಾರೆಯಾಗಿ ಹೇಳುವುದಾದರೆ ಸಮಗ್ರ ಶಿಕ್ಷಣ ಕ್ಷೇತ್ರದ ಸಮುದಾಯದ ಪಾಲುದಾರಿಕೆಯಿಲ್ಲದೇ ರಾಜ್ಯ ಶಿಕ್ಷಣ ನೀತಿಯ ಕರಡು ಸಿದ್ಧವಾಗುವುದು ಸರಿಯೇ? ಅದರಲ್ಲೂ ಮುಂದಿನ ಶೈಕ್ಷಣಿಕ ವರ್ಷದೊಳಗೆ, ವಿಶೇಷವಾಗಿ ಲೋಕಸಭೆಗೂ ಮುನ್ನವೇ ವರದಿ ಸಿದ್ಧಪಡಿಸಲು ಹೊರಟ ರಾಜ್ಯ ಸಮಿತಿಯಿಂದ ರಾಜ್ಯ ಶಿಕ್ಷಣ ಕುರಿತ ಸಮಗ್ರ ವರದಿ ನಿಜಾರ್ಥದಲ್ಲಿ ಸಾಧ್ಯವೇ? ಸಮಿತಿಯ ತುರಾತುರಿಯ ವರದಿ ಸಲ್ಲಿಕೆ, ರಾಜಕಾರಣಕ್ಕಾಗಿ ಮಕ್ಕಳ ಭವಿಷ್ಯವನ್ನು ಬಲಿತೆಗೆದು ಕೊಳ್ಳುವ ಆತುರದ ರಾಜಕಾರಣ ಬೇಡ. ಜಾಗತಿಕ ಮಟ್ಟಕ್ಕೆ ನಮ್ಮ ವಿದ್ಯಾರ್ಥಿಗಳನ್ನು ರೂಪಿಸಲು ಸನ್ನದ್ಧರಾಗಬೇಕಾದ ಸಂದರ್ಭದಲ್ಲಿ ಬದಲಾಗುತ್ತಿರುವ ಉದ್ಯೋಗ ಕ್ಷೇತ್ರದ

ಅಗತ್ಯತೆಗೆ ಅನುಗುಣವಾಗಿ ಶಿಕ್ಷಣವನ್ನು ರೂಪಿಸಬೇಕಾದ ಅಗತ್ಯವಿರುವ ಹಿನ್ನೆಲೆಯಲ್ಲಿ ಕೇವಲ ರಾಜಕೀಯ-ರಾಜಕಾರಣವನ್ನು ಮುಂದಿಟ್ಟುಕೊಂಡು ರಾಷ್ಟ್ರೀಯ ಶಿಕ್ಷಣ ನೀತಿ-2020 ರ ವಿರುದ್ಧ ಇಂದು ರಾಜ್ಯದಲ್ಲಿ ಆಡಳಿತದಲ್ಲಿರುವ ಸರ್ಕಾರ ನಿರ್ಣಯ ತೆಗೆದುಕೊಂಡಿದೆ ಎನ್ನುವುದು ಸುಸ್ಪಷ್ಟ.


ಸರ್ಕಾರದ ಎಸ್ ಇ ಪಿ ರಚನೆಯ ನಿಲುವಿನ ಹಿನ್ನಲೆ ಕುರಿತು ಕೇವಲ ಶಿಕ್ಷಣ ಕ್ಷೇತ್ರವಷ್ಟೇ ಅಲ್ಲದೇ ವಿದ್ಯಾರ್ಥಿಗಳ ಪಾಲಕರಿಗೂ ಅರಿವಿದೆ ಮತ್ತು ಅಸಮಾಧಾನವಿದೆ ಎನ್ನುವುಕ್ಕೆ ಪೀಪಲ್ಸ್ ಫೋರಂ ಫಾರ್ ಕರ್ನಾಟಕ ವೇದಿಕ ಎನ್ ಇ ಪಿ-೨೦೨೦ ರ ಕುರಿತು ರಾಜ್ಯದಾದ್ಯಂತ ಪ್ರತಿ ಜಿಲ್ಲೆಯಲ್ಲೂ ನಡೆಸಿದ ಜಾಗೃತಿ ಒಟ್ಟು 53 ಕಾರ್ಯಕ್ರಮಗಳಲ್ಲಿ ಮತ್ತು ನಂತರ ನಡೆದ ಸಹಿ ಅಭಿಯಾನಗಳಿಗೆ ಸಿಕ್ಕ, ಮನ್ನಣೆ ಸಾಕ್ಷಿ ಕೇವಲ ಒಂದು ತಿಂಗಳ ಕಾಲ ರಾಜ್ಯದಾದ್ಯಂತ ನಡೆಸಿದ ಸಹಿ ಚಳುವಳಿಯಲ್ಲಿ 10 ಲಕ್ಷಕ್ಕೂ ಹೆಚ್ಚು, ಸಹಿ ಸಂಗ್ರಹವಾಗಿದೆ. ಅದರಲ್ಲೂ ಅದರ ಪ್ರಮುಖ ಪಾತ್ರಧಾರಿಗಳು ಶಿಕ್ಷಕರು, ಪಾಲಕರು ಮತ್ತು ವಿದ್ಯಾರ್ಥಿಗಳು ಎಂದು ನಿಮ್ಮ ಗಮನಕ್ಕೆ, ಈ ಮೂಲಕ ತರಲು ಇಚ್ಛಿಸುತ್ತೇವೆ.

ಸಹಿ ಸಂಗ್ರಹ ಅಭಿಯಾನದ ವಿವರ

34

168

ಭಾಗವಹಿಸಿದ ಶೈಕ್ಷಣಿಕ ಜಿಲ್ಲೆಗಳು:

2630

86,600

ಸಹಿ ಮಾಡಿರುವ ಶಿಕ್ಷಕರು & ಆಡಳಿತ ಮಂಡಳಿ:

26980

8.88.173

ಆಸ್ಟೈನ್ ಕ್ಯಾಂಪೇನ್ ಸಹಿ

19,327

10,16,080

ರಾಷ್ಟ್ರೀಯ ಶಿಕ್ಷಣ ನೀತಿ-2020 ಪರ್ಯಾಯವಾಗಿ ಎಸ್ ಇಪಿ ರಚಿಸುತ್ತಿರುವ ಸರ್ಕಾರ ಎನ್ ಇ ಪಿ ಏಕೆ ಬೇಡವೆಂದು ರಾಜಕಾರಣದ ನಿಲುವಿನ ಹೊರತಾಗಿ ಇದುವರೆಗೂ ಸ್ಪಷ್ಟಣೆ ನೀಡಿಲ್ಲ.ರಾಷ್ಟ್ರ ಕೊಂದೇ ಶಿಕ್ಷಣ ನೀತಿಯಿರಬೇಕೆಂಬ ಅಭಿಪ್ರಾಯವನ್ನು ಆಡಳಿತದಲ್ಲಿರುವ ಪಕ್ಷದ ಧುರೀಣರೇ ಆದ ದಿ.ರಾಜೀವ ಗಾಂಧಿಯವರ ಆಶಯವನ್ನೂ ಅದೇ ಪಕ್ಷದವರು ರಾಜ್ಯದಲ್ಲಿ ರಚಿಸಿರುವ ಸರ್ಕಾರ, ರಾಜಕಾರಣ ಮಾಡುವ ಉತ್ಸಾಹದಲ್ಲಿ ಮರೆತಿರೋ ಎಂಬ ಅಭಿಪ್ರಾಯವೂ ನಮ್ಮಲ್ಲಿದೆ.


ಸ್ವಾತಂತ್ರನಂತರ ರೂಢಿಸಿದ ಮೊದಲ ಎರಡೂ ಶಿಕ್ಷಣ ನೀತಿಗಳನ್ನು ಯಾವ ರಾಜ್ಯ ಸರ್ಕಾರಗಳೂ ತೆಗೆದು ಹಾಕಿದ ನಿದರ್ಶನಗಳಿಲ್ಲ. ಶಿಕ್ಷಣ ವಲಯವನ್ನು ರಾಜಕೀಯದಿಂದ ಹೊರಗಿಡುವ ಜವಾಬ್ದಾರಿಯನ್ನು ತಾವೂ ಮುಂದುವರೆಸಿ ಎನ್ನುವ ಹಕ್ಕೊತ್ತಾಯದ ಬೇಡಿಕೆ ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಕೇಷನ್‌ ವೇದಿಕೆಯದು.ರಾಷ್ಟ್ರೀಯ ಶಿಕ್ಷಣ ನೀತಿ-2020 ಪರ್ಯಾಯವಾಗಿ ಎಸ್ ಇಪಿ ರಚಿಸುತ್ತಿರುವ ಸರ್ಕಾರತನ್ನ ಪ್ರಯತ್ನವನ್ನು ನಿಲ್ಲಿಸಲಿ.


ಕೇವಲ ಒಂದು ತಿಂಗಳಲ್ಲಿ ಸಂಗ್ರಹವಾದ ೧೦ ಲಕ್ಷ ಸಹಿ ಹಾಗೂ ನಮ್ಮ ಮನವಿ ಪತ್ರವನ್ನು ನಾವು ಶಿಘ್ರದಲ್ಲಿಯೇ ರಾಜ್ಯ ಪಾಲರಿಗೆ ಮುಖ್ಯ ಮಂತ್ರಿಯವರಿಗೆ, ಉಪ ಮುಖ್ಯ ಮಂತ್ರಿಯವರಿಗೆ ಹಾಗೂ ಶಿಕ್ಷಣ ಸಚಿವರುಗಳಿಗೆ ತಲುಪಿಸುವ ನಿರ್ಧಾರ ತೆಗೆದುಕೊಂಡಿದ್ದೇವೆ. ರಾಜ್ಯದಲ್ಲಿ ಅಭ್ಯಾಸಮಾಡುತ್ತಿರುವ ಅದರಲ್ಲೂ ಆರ್ಥಿಕವಾಗಿ ಹಿಂದುಳಿದ ಮಕ್ಕಳೇ ಹೆಚ್ಚಾಗಿರುವ ಸರ್ಕಾರಿ ಶಾಲೆಗಳ ಮಕ್ಕಳು ರಾಷ್ಟ್ರೀಯ ಮುಖ್ಯವಾಹಿನಿಯ ಶಿಕ್ಷಣ ವ್ಯವಸ್ಥೆಯಿಂದ ಹೊರಬರುವುದರ ವಿರುದ್ಧದ ನಮ್ಮ ಹೋರಾಟಕ್ಕೆ ನಿಮ್ಮ ಬೆಂಬಲವನ್ನು ನಾವು ಈ ಮೂಲಕ ವಿನಂತಿಸುತ್ತಿದ್ದೇವೆ.

Comments

Popular posts from this blog