ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಾರ್ಟಿಯ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಾರ್ಟಿಯ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ
ಬೆಂಗಳೂರು : 2023 ನೇ ಸಾಲಿನ ವಿಧಾನಸಭಾ ಚುನಾವಣೆಗೆ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಾರ್ಟಿಯಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಇಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷರಾದ ಡಾ. ಎನ್. ಮೂರ್ತಿ ರವರು ಬಿಡುಗಡೆ ಮಾಡಿದರು. ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ವತಿಯಿಂದ ನಗರದ ಪ್ರೆಸ್ ಕ್ಲಬ್ ಆವರಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಡಾ. ಎನ್. ಮೂರ್ತಿರವರು ಮಾತನಾಡಿ 2023 ನೇ ಸಾಲಿನ ಚುನಾವಣೆಯಲ್ಲಿ ನಮ್ಮ ಪಾರ್ಟಿಯಿಂದ ತುರುವೇಕೆರೆ ಕ್ಷೇತ್ರದಿಂದ ಎನ್. ಅಟ್ಟಯ್ಯ, ಕೊಪ್ಪಳ ಕ್ಷೇತ್ರದಿಂದ ಗವಿಸಿದ್ದೇಗೌಡ ಚೆನ್ನಗೌಡ ಮಾಲಿ ಪಾಟೀಲ, ಯಲಬುರ್ಗಿ ಕ್ಷೇತ್ರದಿಂದ ರಾಮಲಿಂಗಪ್ಪ, ಕನಕಗಿರಿ ಕ್ಷೇತ್ರದಿಂದ ಡಾ. ಬಿ. ಜ್ಞಾನ ಸುಂದರ, ಗಂಗಾವತಿ ಕ್ಷೇತ್ರದಿಂದ ಪದ್ಮಾವತಿ, ಹಗರಿಬೊಮ್ಮನಹಳ್ಳಿ ಕ್ಷೇತ್ರದಿಂದ ಜಿ. ನಂದಕುಮಾರ್, ರಾಯಚೂರು ನಗರ ಕ್ಷೇತ್ರದಿಂದ ಶಾಂತಪ್ಪ ಚತ್ರಾಲಿ, ರಾಯಚೂರು ಗ್ರಾಮಾಂತರ ಕ್ಷೇತ್ರದಿಂದ ರವಿಕುಮಾರ್ ನಾಯಕ ಗೋನಾಳ, ಮಾನವಿ ಕ್ಷೇತ್ರದಿಂದ ವೀರೇಶ್ ನಾಯಕ ನಿರಮಾನವಿ, ಮಸ್ಕಿ ಕ್ಷೇತ್ರದಿಂದ ಎಸ್ ಮಾರುತಿ ನಾಯಕ, ಲಿಂಗಸೂರು ಕ್ಷೇತ್ರದಿಂದ ಬಸವರಾಜ ಕುಣಿಕಲ್ಲೂರು, ರಾಯಚೂರು ಕ್ಷೇತ್ರದಿಂದ ಬಸವರಾಜ ಸಿಂಧನೂರು ರವರನ್ನು ನಮ್ಮ ಪಾರ್ಟಿಯ ಅಭ್ಯರ್ಥಿಗಳಾಗಿ ಆಯ್ಕೆ ಮಾಡಿ ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗಿದೆ ಎಂದರು,

Comments
Post a Comment