ಪೊರಕೆ ಪಕ್ಷ ಜೆಸಿಬಿ ಪಕ್ಷಗಳ ಕೊಳೆಯನ್ನ ಸ್ವಚ್ಚಗೊಳಿಸಲಿದೆ: ರಾಘವ್‌ ಚಡ್ಡಾ ಆಪ್‌ ರಾಷ್ಟ್ರೀಯ ವಕ್ತಾರ*

ಪೊರಕೆ ಪಕ್ಷ ಜೆಸಿಬಿ ಪಕ್ಷಗಳ ಕೊಳೆಯನ್ನ ಸ್ವಚ್ಚಗೊಳಿಸಲಿದೆ: ರಾಘವ್‌ ಚಡ್ಡಾ ಆಪ್‌ ರಾಷ್ಟ್ರೀಯ ವಕ್ತಾರ




- ಪುಲಕೇಶಿನಗರ ವಿಧಾನಸಭಾಕ್ಷೇತ್ರದ ಆಪ್‌ ಅಭ್ಯರ್ಥಿ ಸುರೇಶ್‌ ರಾಥೋಡ್‌ ಪರ ಬೃಹತ್‌ ರೋಡ್‌ ಶೋ ಮತ್ತು ನಾಮಪತ್ರ ಸಲ್ಲಿಕೆ


*ಬೆಂಗಳೂರು 19 ಏಪ್ರಿಲ್‌ 2023*: ರಾಜ್ಯದಲ್ಲಿ ಜನರು ಜೆಸಿಬಿ ಪಕ್ಷಗಳ ದುರಾಡಳಿತದಿಂದ ಬೇಸತ್ತಿದ್ದಾರೆ. ಜೆಸಿಬಿ ಪಕ್ಷಗಳ ಕೊಳೆಯನ್ನ ಸ್ವಚ್ಚಗೊಳಿಸಲು ಪೊರಕೆ ಪಕ್ಷವಾದ ಆಪ್‌ ಗೆ ಬೆಂಬಲ ನೀಡಲಿದ್ದಾರೆ ಎಂದು *ಆಪ್‌ ರಾಷ್ಟ್ರೀಯ ವಕ್ತಾರರಾದ ರಾಘವ್‌ ಚಡ್ಡಾ* ಹೇಳಿದರು.


ಇಂದು ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿ ಸುರೇಶ್‌ ರಾಥೋಡ್‌ ಪರ ಬೃಹತ್‌ ರೋಡ್‌ ಶೋ ನಡೆಸಿ ಮಾತನಾಡಿದರು, ಕರ್ನಾಟಕ ರಾಜ್ಯದಲ್ಲಿ ಬುದ್ದಿವಂತ ಮತದಾರರಿದ್ದಾರೆ. ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳ ದುರಾಡಳಿತದಿಂದ ಬೇಸತ್ತಿದ್ದಾರೆ. 40 ಪರ್ಸೆಂಟ್‌ ಲಂಚದ ಸರಕಾರದ ಹೊರತಾಗಿ ದೆಹಲಿ, ಪಂಜಾಬ್‌ ನಲ್ಲಿರುವ 100 ಪರ್ಸೆಂಟ್‌ ಪ್ರಾಮಾಣಿಕ ಸರಕಾರ ಅಧಿಕಾರಕ್ಕೆ ಬರಲಿ ಎನ್ನುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷ ಕರ್ನಾಟಕ ರಾಜ್ಯದಲ್ಲಿ ಗಣನೀಯ ಸಾಧನೆ ಮಾಡಲಿದೆ. ಈ ಮೂಲಕ ದೆಹಲಿ, ಪಂಜಾಬ್‌ ರಾಜ್ಯಗಳಲ್ಲಿರುವ ಉಚಿತ ವಿದ್ಯುತ್‌, ನೀರು, ಶಿಕ್ಷಣದಂತಹ ಸೌಲಭ್ಯವನ್ನು ಪಡೆದುಕೊಳ್ಳುತ್ತ ಸ್ಪಷ್ಟ ಹೆಜ್ಜೆಯನ್ನು ಇಡಲಿದ್ದಾರೆ ಎಂದರು. 


ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿ ಸುರೇಶ್‌ ರಾಥೋಡ್‌ ಮಾತನಾಡಿ, ಪುಲಕೇಶಿ ನಗರದಲ್ಲಿ ಜನರು ಅಗತ್ಯ ಮೂಲಭೂತ ಸೌಕರ್ಯಗಳಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಜನರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಸಮಸ್ಯೆಗಳನ್ನು ಕಡಿಮೆ ಮಾಡುವುದು ನಮ್ಮ ಗುರಿಯಾಗಿದೆ. ಕ್ಷೇತ್ರದ ಮತದಾರರು ಆಮ್‌ ಆದ್ಮಿ ಪಕ್ಷದ ಕೈ ಹಿಡಿಯಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು. 

ಇದಕ್ಕೂ ಮುನ್ನ ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬೃಹತ್‌ ರೋಡ್‌ ಶೋ ನಡೆಸಲಾಯಿತು.

Comments

Popular posts from this blog